ಮತದಾನ ಜಾಗೃತಿಗಾಗಿ ಖುದ್ದು ಮನೆಗಳಿಗೆ ತೆರಳಿ ಚೀಟಿ ವಿತರಿಸಿದ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ

ದೇಶದಾದ್ಯಂತ ಮತದಾನ ಜಾಗೃತಿಗಾಗಿ ಚುನಾವಣಾ ಆಯೋಗ ವಿವಿಧ ರೀತಿಯ ಅಭಿಯಾನ

ಮಿಶನ್ ಕಂಪೌಂಡ್ ವಠಾರದ ಮನೆಗಳಿಗೆ ಭೇಟಿ ನೀಡಿದ ಹೆಪ್ಸಿಬಾ ರಾಣಿ ಅಲ್ಲಿನ ಮತದಾರರಿಗೆ ಮತದಾರರ ಚೀತಿ ನೀಡಿದರು

ಉಡುಪಿ: ದೇಶದಾದ್ಯಂತ ಮತದಾನ ಜಾಗೃತಿಗಾಗಿ ಚುನಾವಣಾ ಆಯೋಗ ವಿವಿಧ ರೀತಿಯ ಅಭಿಯಾನಗಳನ್ನು ಕೈಗೊಂಡು ಹೆಚ್ಚಿನ ಪ್ರಮಾಣದ ಮತದಾನಕ್ಕಾಗಿ ಶ್ರನಿಸುತ್ತಿದ್ದರೆ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ತಾವೇ ಸ್ವತಃ ಮತದಾರರ ಬಳಿ ತೆರಳಿ ಮತದಾರರ ಚೀಟಿ ವಿತರಿಸಿದ್ದಾರೆ.

ಉಡುಪಿಯ ಮಿಶನ್ ಕಂಪೌಂಡ್ ವಠಾರದ ಮನೆಗಳಿಗೆ ಭೇಟಿ ನೀಡಿದ ಹೆಪ್ಸಿಬಾ ರಾಣಿ ಅಲ್ಲಿನ ಮತದಾರರಿಗೆ ಮತದಾರರ ಚೀತಿ ನೀಡಿ ಕಡ್ಡಾಯವಾಗಿ ಮತದಾನ ಮಾಡೂವಂತೆ ಆಗ್ರಹಿಸಿದರು. ವೋಟರ್ ಐಡಿ ಕಾರ್ಡ್ ಇಲ್ಲದವರು ಚುನಾವಣಾ ಆಯೋಗ ಉಲ್ಲೇಖಿಸಿದ ಯಾವುದೆ ದಾಖಲೆಗಳನ್ನು ತೆಗೆದುಕೊಂಡು ಹೋಗಬಹುದು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಅಮ್ಮಣ್ಣಿ ರಾಮಣ್ಣ ಹಾಲ್ ಸಮೀಪದ 97 ವರ್ಷ ಪ್ರಾಯದ ಮಹಿಳೆಗೆ ಮತದಾರರ ಚೀಟಿ ನೀದಿದ ಜಿಲ್ಲಾಧಿಕಾರಿ ಆ ಮಹಿಳೆಯ ಹೆಸರನ್ನು ಗುರುತಿಸಿಕೊಂಡು ಮತದಾನದ ದಿನ ಅವರು ಮತದಾನ ಮಾಡಲು ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಅವರಿಗೆ ನೀಡುವಂತೆ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಉಡುಪಿಯ ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ, ಉಡುಪಿಯ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಜಿಲ್ಲಾ ವಕ್ತಾರ ಖಾದರ್ ಶಾ ಮುಂತಾದವರು ಜಿಲ್ಲಾಧಿಕಾರಿಗೆ ಸಾಥ್ ನೀಡಿದರು.

Get real time updates directly on you device, subscribe now.