ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡ ಸಿಧು: ಪ್ರಚಾರಕ್ಕೆ ಬಂದಿಲ್ಲ, ಮೊಬೈಲ್‌ಗೂ ಸಿಗುತ್ತಿಲ್ಲ!

ಸಿಧು ಯಾರ ಕೈಗೂ ಸಿಗುತ್ತಿಲ್ಲ, ಅವರ ಮೊಬೈಲ್ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ.

ಲೋಕಸಭಾ ಚುನಾವಣೆಯಲ್ಲಿ ಪಕ್ಷ ತಮ್ಮ ಪತ್ನಿಗೆ ಟಿಕೆಟ್ ನೀಡಿಲ್ಲ ಎಂದು ಸಿಧು ಮುನಿಸಿಕೊಂಡಿದ್ದು, ಸಿಧು ಪತ್ನಿಗೆ ಚಂಡೀಘಡದಿಂದ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗಿತ್ತು.

ಅಮೃತಸರ: ಲೋಕಸಭಾ ಚುನಾವಣೆಗೆ ಇನ್ನು ಕೇವಲ 19 ದಿನಗಳು ಮಾತ್ರ ಬಾಕಿ ಇದ್ದು ಪಂಜಾಬ್‌ನಲ್ಲಿ ಸಚಿವ ನವಜೋತ್ ಸಿಂಗ್ ಸಿಧು ಪ್ರಚಾರ ಕಾರ್ಯದಿಂದ ದೂರುವುಳಿದು ಅಚ್ಚರಿ ಮೂಡಿಸಿದ್ದಾರೆ.

ಸಿಧು ಯಾರ ಕೈಗೂ ಸಿಗುತ್ತಿಲ್ಲ, ಅವರ ಮೊಬೈಲ್ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಸಿಧು ತಮ್ಮದೇ ನಾಯಕರ ವಿರುದ್ಧ ಮುನಿಸಿಕೊಂಡರೇ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದೇ ಕಾರಣಕ್ಕೆ ಸಿಧು ಪಕ್ಷದ ಪ್ರಚಾರ ಕಾರ್ಯದಿಂದ ದೂರವುಳಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಬಿಜೆಪಿಯಲ್ಲಿ ಸಿಧು, ಅಮೃತಸರ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರಗೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಬಳಿಕ ನಡೆದ ಪಂಜಾಬ್ ವಿಧಾನಸಭೆ ಚುನಾವಣೆ ಬಳಿಕ ಗೆದ್ದ ಸಿಧು ಸಚಿವರೂ ಕೂಡ ಆಗಿದ್ದರು.

ಲೋಕಸಭಾ ಚುನಾವಣೆಯಲ್ಲಿ ಪಕ್ಷ ತಮ್ಮ ಪತ್ನಿಗೆ ಟಿಕೆಟ್ ನೀಡಿಲ್ಲ ಎಂದು ಸಿಧು ಮುನಿಸಿಕೊಂಡಿದ್ದು, ಸಿಧು ಪತ್ನಿಗೆ ಚಂಡೀಘಡದಿಂದ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಪವನ್ ಬನ್ಸಾಲ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಅಂತೆಯೇ ನವಜೋತ್ ಸಿಂಗ್ ಸಿಧು ಹೆಸರನ್ನು ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಿಂದಲೂ ಕೈ ಬಿಡಲಾಗಿದ್ದು, ಇದೇ ಕಾರಣಕ್ಕೆ ಸಿಧು ಪಕ್ಷದ ಪ್ರಚಾರ ಕಾರ್ಯದಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.

Get real time updates directly on you device, subscribe now.