ಕುಂದಾಪುರ: ಬಸ್ ನಲ್ಲೇ ವಿದ್ಯಾರ್ಥಿ ಸಾವು

ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಮರಳುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ

ಬಳ್ಕೂರು ಗ್ರಾಮದ ದೇವಸ್ಥಾನಬೆಟ್ಟು ನಿವಾಸಿ ಎಚ್.ಎಸ್.ಶ್ರೀಧರಮೂರ್ತಿಯವರ ಪುತ್ರ ಸುಹಾಸ ಎಸ್(22) ಎಂದು ಮೃತ ಯುವಕನನ್ನು ಗುರುತಿಸಲಾಗಿದೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ರಾಜಧಾನಿ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಮರಳುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವರು ಬಸ್ಸಿನಲ್ಲೇ ಮೃತಪಟ್ಟ ಖೇದಕರ ಘಟನೆ ವರದಿಯಾಗಿದೆ. ಬಳ್ಕೂರು ಗ್ರಾಮದ ದೇವಸ್ಥಾನಬೆಟ್ಟು ನಿವಾಸಿ ಎಚ್.ಎಸ್.ಶ್ರೀಧರಮೂರ್ತಿಯವರ ಪುತ್ರ ಸುಹಾಸ ಎಸ್(22) ಎಂದು ಮೃತ ಯುವಕನನ್ನು ಗುರುತಿಸಲಾಗಿದೆ.

ಬಸ್ಸಿನಲ್ಲಿ ರಾತ್ರಿ ಊರಿಗೆ ಪ್ರಯಾಣ ಹೊರಟಿದ್ದ ಇವರು ಬೆಳಿಗ್ಗೆ ಬಸ್ಸಿಂದ ಇಳಿಯದೇ ಇದ್ದಾಗ ನಿರ್ವಾಹಕ ನೋಡಿದ ಸಂದರ್ಭ ಮೃತಪಟ್ಟಿರುವ ಸಂಗತಿ ತಿಳಿದುಬಂದಿದೆ. ಹೃದಯಾಘಾತ ಅಥವಾ ಯಾವ ಕಾರಣದಿಂದ ಮೃತಪಟ್ಟಿದ್ದಾರೆ ಎಂಬುದು ತಿಳಿದುಬಂದಿಲ್ಲ. ಸುಹಾಸ್ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.