ಚುಂಗಿಗುಡ್ಡೆ ಮಹಾಬಲ ಹೆಬ್ಬಾರ್ ನಿಧನ

ಕೆಲ ಕಾಲದಿಂದ ಅವರು ತೀವೃ ಅಸೌಖ್ಯದಿಂದ ಬಳಲುತ್ತಿದ್ದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಬೈಂದೂರು ತಾಲೂಕಿನ ನಾಡ ಗ್ರಾಮದ ಹೆಬ್ಬಾರ್ ಮನೆತನದ ಚುಂಗಿಗುಡ್ಡೆಯ ಮಹಾಬಲ ಹೆಬ್ಬಾರ(65) ಅವರು ನಿಧನ ಹೊಂದಿದ್ದಾರೆ. ಕೆಲ ಕಾಲದಿಂದ ಅವರು ತೀವೃ ಅಸೌಖ್ಯದಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಮರಳಿದ್ದ ಅವರ ಆರೋಗ್ಯ ಸ್ಥಿತಿ ಆ ಬಳಿಕ ಸುಧಾರಿಸದೇ ಇಹಲೋಕ ತ್ಯಜಿಸಿದ್ದಾರೆ.

ದಿ.ಕಾಳಿಂಗ ಹೆಬ್ಬಾರ ಅವರ ಪುತ್ರರಾದ ಮಹಾಬಲ ಹೆಬ್ಬಾರ ಅವರು ಪತ್ನಿ ಮಾನಸ, ಸಹೋದರರು, ಸಹೋದರಿಯರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ ನಡೆಯಲಿದೆ ಎಂದು ನಿಕಟ ಸಂಬಂಧಿ ಧರ್ಮೇಂದ್ರ ಹೆಬ್ಬಾರ ಅವರು ತಿಳಿಸಿದ್ದಾರೆ.

ತಂದೆ ಕಾಳಿಂಗ ಹೆಬ್ಬಾರ ಅವರಂತೆಯೇ ಗ್ರಾಮದ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳಲ್ಲಿ ಮುಂದಾಳುವಾಗಿದ್ದ ಮಹಾಬಲ ಹೆಬ್ಬಾರ ಅವರು ಅಪಾರ ಜನಮನ್ನಣೆಗೆ ಪಾತ್ರರಾಗಿದ್ದರು. ಕಿರಿಯರಿಂದ ಹಿರಿಯರ ತನಕ ಎಲ್ಲ ವಯೋಮಾನದ ಜನರೊಡನೆ ಸೌಜನ್ಯದಿಂದ ಬೆರೆತು ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದ ಹೆಬ್ಬಾರ ಅವರು ಈ ಕಾರಣಕ್ಕೆ ಜನಪ್ರೀತಿಗಳಿಸಿದ್ದರು.

Get real time updates directly on you device, subscribe now.