ಕೊರೋನಾ ಸಂಕಷ್ಟದ ನಡುವೆಯೆ ಸರ್ಬಿಯಾಕ್ಕೆ ರಕ್ಷಣಾ ಕವಚಗಳ ರಫ್ತು ಮಾಡಿದ ಭಾರತ!

ಈ ವಿಷಯ ಸರ್ಬಿಯಾದಲ್ಲಿರುವ ಅಧಿಕಾರಿಗಳು ಟ್ವೀಟ್ ಮಾಡಿದ ಬಳಿಕ ಬೆಳಕಿಗೆ ಬಂದಿದೆ.

ಭಾರತದಲ್ಲಿ ವೈದ್ಯಕೀಯ ಸಿಬ್ಬಂದಿಗಳಿಗೆ ಅವಶ್ಯಕವಾದ ರಕ್ಷಣಾತ್ಮಕ ಕವಚಗಳು, ಮಾಸ್ಕ್‌ಗಳು, ಗ್ಲೌಸ್‌ಗಳ ಅಪಾರ ಕೊರತೆ ಇದ್ದು ಈಗಾಗಲೇ ಇದನ್ನು ತರಿಸಿಕೊಳ್ಳಲು ಚೀನಾ ದೇಶಕ್ಕೆ ಭಾರತ ವಿನಂತಿ ಮಾಡಿದೆ…

ನವದೆಹಲಿ: ಸರಿಯಾದ ರಕ್ಷಣಾ ಕವಚಗಳು, ಕೈಗವಸುಗಳು ಮತ್ತು ಮಾಸ್ಕ್‌ಗಳ ಕೊರತೆಯಿಂದಾಗಿ ಅವುಗಳನ್ನು ಧರಿಸದೆ ರೋಗಿಗಳ ಸೇವೆ ಮಾಡಿದ ಭಾರತದ ನೂರಕ್ಕೂ ಹೆಚ್ಚು ವೈದ್ಯರುಗಳು ಕ್ವಾರಂಟೈನ್‌ನಲ್ಲಿ ಇರುವಾಗಲೇ ಭಾರತ ಸರ್ಬಿಯಾಕ್ಕೆ ಅಪಾರ ಪ್ರಮಾಣದ ಸರ್ಜಿಕಲ್ ಗ್ಲೌಸ್‌ಗಳು, ರಕ್ಷಣಾ ಕವಚಗಳು ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಎರಡು ವಿಮಾನಗಳ ಮೂಲಕ ರಫ್ತು ಮಾಡಿದೆ. ಈ ವಿಷಯ ಸರ್ಬಿಯಾದಲ್ಲಿರುವ ಅಧಿಕಾರಿಗಳು ಟ್ವೀಟ್ ಮಾಡಿದ ಬಳಿಕ ಬೆಳಕಿಗೆ ಬಂದಿದೆ.

ಭಾರತದಲ್ಲಿ ವೈದ್ಯಕೀಯ ಸಿಬ್ಬಂದಿಗಳಿಗೆ ಅವಶ್ಯಕವಾದ ರಕ್ಷಣಾತ್ಮಕ ಕವಚಗಳು, ಮಾಸ್ಕ್‌ಗಳು, ಗ್ಲೌಸ್‌ಗಳ ಅಪಾರ ಕೊರತೆ ಇದ್ದು ಈಗಾಗಲೇ ಇದನ್ನು ತರಿಸಿಕೊಳ್ಳಲು ಚೀನಾ ದೇಶಕ್ಕೆ ಭಾರತ ವಿನಂತಿ ಮಾಡಿದೆ. ಭಾರತದ ವೈದ್ಯಕೀಯ ಸಿಬ್ಬಂದಿಗಳು ಈ ರಕ್ಷಣಾ ಕವಚಗಳಿಲ್ಲದೆ ಅಪಾರ ಕಷ್ಟದಲ್ಲಿದ್ದಾರೆ, ಕೆಲವೆಡೆ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ರೈನ್ ಕೋಟ್‌ಗಳನ್ನು ಧರಿಸಿ ಸೇವೆ ನೀಡುತ್ತಿದ್ದಾರೆ. ಕೊರೋನಾ ಸೋಂಕು ವ್ಯಾಪಕವಾಗುವ ಮುಮ್ಚೆ ಭಾರತ ಸರ್ಕಾರ ಈ ದಿಸೆಯಲ್ಲಿ ಯಾವುದೇ ಸಿದ್ಧತೆ ಮಾಡಿಕೊಳ್ಳದೆ ಇರುವುದು ಅಪಾರ ಟೀಕೆಗೆ ಗುರಿಯಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲೇ ಸರ್ಬಿಯಾಕ್ಕೆ ಈ ರಕ್ಷಣಾ ಕವಚಗಳು ಮತ್ತು ವೈದ್ಯಕೀಯ ಸಾಮಗ್ರಿ ಭಾರತದಿಮ್ದ ರಫ್ತಾಗಿದೆ.

ಮಾರ್ಚ್ 29 ರಂದು ಕೊಚ್ಚಿಯ ವಿಮಾನ ನಿಲ್ದಾಣದಿಂದ ಸರ್ಬಿಯಾಕ್ಕೆ ಈ ಸಾಮಗ್ರಿಗಳನ್ನು ಹೊತ್ತ ಎರಡನೆಯ ವಿಮಾನ ರವಾನೆಯಾಗಿದೆ. ಒಟ್ಟು 90 ಟನ್ ಸಾಮಗ್ರಿಗಳು ಈ ವಿಮಾನದಲ್ಲಿದ್ದು 50 ಟನ್‌ಗಳಷ್ಟು ರಕ್ಷಣಾ ಕವಚ, ಮಾಸ್ಕ್, ಗ್ಲೌವ್ಸ್‌ಗಳು ಇದರಲ್ಲಿ ಒಳಗೊಂಡಿದೆ.

ತನಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರದ ಗೃಹ ಸಚಿವಾಲಯ ಹೇಳಿರುವುದು ಇನ್ನಷ್ಟು ಗೊಂದಲಕ್ಕೀಡು ಮಾಡಿದ್ದು ಪ್ರತಿಪಕ್ಷಗಳು ಈ ಕುರಿತು ಉತ್ತರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

Get real time updates directly on you device, subscribe now.