ಹಸಿವೆ, ಹತಾಶೆ! ಸ್ಮಶಾನದಲ್ಲಿ ಬಿದ್ದ ಬಾಳೆಹಣ್ಣು ತಿಂದು ಹೊಟ್ಟೆ ತುಂಬಿಸಿಕೊಂಡ ವಲಸೆ ಕಾರ್ಮಿಕರು

ನವದೆಹಲಿ: ದಿನಕ್ಕೆ ಒಂದು ಹೊತ್ತಿನ ಅನ್ನಕ್ಕಾಗಿ ಸರತಿ ಸಾಲಿನಲ್ಲಿ ದಿನಗಟ್ಟಲೆ ಕಾದರೂ ಊಟ ಸಿಗುತ್ತಿಲ್ಲ. ಮೇಲ್ ಸೂರಿಲ್ಲ. ಕೆಳಗೆ ಚಾಪೆ ಇಲ್ಲ. ದೆಹಲಿಯ ಫೈಲ್ ಓವರ್‌ಗಳ ಕೆಳಗೆ, ಯಮುನಾ ನದಿಯ ದಂಡೆಯಲ್ಲಿ, ಖಾಲಿ ಜಾಗಗಳಲ್ಲಿ ಅಕ್ಷರಶಃ ನಿರ್ಗತಿಕರಂತೆ ಹಸಿವಿನಲ್ಲಿ ದಿನ ಕಳೆಯುತ್ತಿರುವ ವಲಸೆ ಕಾರ್ಮಿಕರ ಗೋಳು ಹೇಳತೀರದಾಗಿದೆ. ದೇಶದಾದ್ಯಂತ ವಿವಿಧ ನಗರಗಳಲ್ಲಿ ಇದೇ ಸ್ಥಿತಿ ಇದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಲ ನಿರ್ಲಕ್ಷ್ಯದಿಂದಾಗಿ ವಲಸೆ ಕಾರ್ಮಿಕರು ಮತ್ತು ಬಡವರು ಹಸಿವಿನಿಂದಲೇ ಸಾಯುವ ಹಂತಕ್ಕೆ ಬಂದಿದ್ದಾರೆ.

ವಲಸೆ ಕಾರ್ಮಿಕರಿಗೆ ಹೊಟ್ಟೆಗೆ ಒಂದು ಹೊತ್ತಿನ ಅನ್ನ ಸಿಗದೆ ಎಂತಹ ಸ್ಥಿತಿಗೆ ತಲುಪಿದ್ದಾರೆಂದರೆ ನಿನ್ನೆ ಅಂತ್ಯಕ್ರಿಯೆಯ ವಿಧಿಗಳ ಬಳಿಕ ಸ್ಮಶಾನದಲ್ಲಿ ಎಸೆದು ಹೋದ ಬಾಳೆಹಣುಗಳನ್ನು ವಲಸೆ ಕಾರ್ಮಿಕರು ಹೆಕ್ಕಿ ತಿಂದಿದ್ದಾರೆ. ಹಾಳಾದ ಬಾಳೆಹಣ್ಣುಗಳ ನಡುವೆ ಚೆನ್ನಾಗಿರಬಹುದಾದ ಬಾಳೆಹಣ್ಣುಗಳನ್ನು ವಿಂಗಡಿಸಿ ವಲಸೆ ಕಾರ್ಮಿಕರು ತಿನ್ನುತ್ತಿದ್ದ ದಯನೀಯ ದೃಶ್ಯ ದೆಹಲಿಯ ಯಮುನಾ ನದಿಯ ದಡದಲ್ಲಿರುವ ನಿಗಮ್‌ಬೋಧ್ ಘಾಟ್‌ನ ಬಳಿ ಕಂಡುಬಂದಿದೆ. ನಿಗಮ್‌ಬೋಧ್ ಘಾಟ್ ದೆಹಲಿಯಲ್ಲಿ ಮೃತದೇಹಗಳನ್ನು ಸುಡುವ ಪ್ರಮುಖ ಚಿತಾಗಾರವಾಗಿದೆ.

ದೆಹಲಿ ಮತ್ತು ಇತರ ರಾಜ್ಯಗಳ ಸರ್ಕಾರಗಳು ವಲಸೆ ಕಾರ್ಮಿಕರಿಗೆ ಆಶ್ರಯ, ಆಹಾರ ಕೊಡುವುದರಲ್ಲಿ ಸಂಪೂರ್ಣ ವಿಫಲವಾಗಿದ್ದು ವಲಸೆ ಕಾರ್ಮಿಕರ ಸಹನೆಯ ಕಟ್ಟೆ ಒಡೆಯುತ್ತಿದೆ.

Get real time updates directly on you device, subscribe now.