ಲಾಕ್ ಡೌನ್ ವೇಳೆ ಸುಮ್ಮನೆ ಕೂತಿಲ್ಲ: ಮಸ್ಕತ್‌ನಲ್ಲಿರುವ ಜಿಹಾದಿಗಳ ವಿರುದ್ಧ ಸಿಡಿದೇಳುವ ಕೆಲಸ ಮಾಡಿದ್ದೇನೆ

ಲಾಕ್ ಡೌನ್ ಅಂತ ಸುಮ್ಮನೆ ಕೂತಿಲ್ಲ. ಮಸ್ಕತ್‌ನಲ್ಲಿ ಇರುವ ಜಿಹಾದಿಗಳ ವಿರುದ್ಧ ಹೋರಾಡುತ್ತಿದ್ದೇನೆ. ಜೊತೆಗೆ ನನ್ನ ಕ್ಷೇತ್ರದ ಮತದಾರರ ಕಷ್ಟಕ್ಕೆ ಸ್ಪಂದಿಸುತ್ತಿದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಲಾಕ್ ಡೌನ್ ಅಂತ ಸುಮ್ಮನೆ ಕೂತಿಲ್ಲ. ಮಸ್ಕತ್‌ನಲ್ಲಿ ಇರುವ ಜಿಹಾದಿಗಳ ವಿರುದ್ಧ ಹೋರಾಡುತ್ತಿದ್ದೇನೆ. ಜೊತೆಗೆ ನನ್ನ ಕ್ಷೇತ್ರದ ಮತದಾರರ ಕಷ್ಟಕ್ಕೆ ಸ್ಪಂದಿಸುತ್ತಿದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ವ್ಯಕ್ತಿಯೋರ್ವರು ಕರೆ ಮಾಡಿ ಉಡುಪಿಯ ಲಾಕ್ ಡೌನ್ ಸಡಿಲಿಕೆಯ ಸಮಯದ ಬಗ್ಗೆ ಕೇಳಿದಾಗ ‘ಅದು ನನಗೆ ಗೊತ್ತಿಲ್ಲ’ ಎಂದು ಉತ್ತರಿಸಿದ್ದ ಕಾಲ್ ರೆಕಾರ್ಡ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಸ್ಪಷ್ಟನೆ ನೀಡಿದ್ದಾರೆ.

ಮಸ್ಕತ್‌ನಲ್ಲಿ ಕೇರಳದ ನಮ್ಮ ಹಿಂದೂ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಆ ಜಿಹಾದಿಗಳ ವಿರುದ್ಧ ನಾನು ಹೋರಾಡುತ್ತಿದ್ದೇನೆ. ಸಿಡಿದೇಳುವ ಕೆಲಸ ಮಾಡಿದ್ದೇನೆ. ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಕುರಿತು ಪತ್ರ ಬರೆದಿದ್ದೇನೆ. ಈ ಹಿನ್ನೆಲೆಯಲ್ಲಿ ನನಗೆ ತುಂಬಾ ಬೆದರಿಕೆ ಕರೆಗಳು ಬರುತ್ತಿವೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕಳೆದ ಮುರು ವರ್ಷಗಳಿಂದಲೂ ನನಗೆ ಜಿಹಾದಿಗಳಿಂದ ಬೆದರಿಕೆ ಕರೆ ಬರುತ್ತಿದೆ. ಈ ಕರೆಗಳು ಇಂಟರ್ನೆಟ್ ಕಾಲ್ ಆಗಿರುವ ಕಾರಣ ಪತ್ತೆ ಮಾಡಲಿಕ್ಕೆ ಪೊಲೀಸ್ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಇದೇ ರೀತಿ ಬೆದರಿಕೆ ಕರೆಗಳು ಈಗಲೂ ಮಸ್ಕತ್‌ನ ಜಿಹಾದಿಗಳಿಂದ ಬರುತ್ತಿದ್ದು ನಿನ್ನೆ ಬೆಳಿಗ್ಗೆ ಲಾಕ್ ಡೌನ್ ಸಮಯದ ಬಗ್ಗೆ ಕರೆ ಬಂದಾಗ ನಾನು ‘ನನಗೆ ಗೊತ್ತಿಲ್ಲ’ ಎಂದು ಹೇಳಿದ್ದೆ. ಆದರೆ ಅದು ಉದ್ದೇಶಪೂರ್ವಕ ಅಲ್ಲ ಎಂದು ಸಂಸದೆ ಹೇಳಿದ್ದಾರೆ.

ಒಂದು ದಿನವೂ ನಾನು ವಿಶ್ರಾಂತಿ ಪಡೆಯಲಿಲ್ಲ. ನಿತ್ಯವೂ ಕ್ಷೇತ್ರದ ಮತದಾರರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ. ಧವಸಧಾನ್ಯಗಳ ವ್ಯವಸ್ಥೆ ಮಡುತ್ತಿದ್ದೇನೆ. ವೈರಲ್ ಆಗಿರುವ ಕರೆಯ ಉದ್ದೇಶವೇನು, ಅದರ ಹಿನ್ನೆಲೆ ಮುನ್ನೆಲೆ ಏನು ಎಂದು ಗೊತ್ತಿಲ್ಲ. ನನ್ನ ಬಗ್ಗೆ ಅವರು ಅರ್ಥಮಾಡಿಕೊಳ್ಳಬೇಕು. ಆದರೆ ಹೀಗೆ ನನ್ನ ಬಗ್ಗೆ ಅಪಪ್ರಚಾರ ಮಾಡುವವರು ನಾನು ನಿತ್ಯವೂ ಜನಸೇವೆಯಲ್ಲಿ ಇರುವುದನ್ನು ತಿಳಿದು ಮಾತನಾಡಬೇಕು ಎಂದು ವಿಷಾದದಿಂದ ನುಡಿದಿದ್ದಾರೆ.

Get real time updates directly on you device, subscribe now.