ಉಡುಪಿ: ಹೃದಯಾಘಾತದಿಂದ ವ್ಯಕ್ತಿ ಸಾವು, ಗಂಟಲ ದ್ರವ ಕೊರೋನಾ ಪರೀಕ್ಷೆಗೆ ರವಾನೆ

ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಗಂಟಲ ದ್ರವ ಕೊರೋನಾ ಪರೀಕ್ಷೆಗೆ ರವಾನೆ.

ಕರಾವಳಿ ಕರ್ನಾಟಕ ವರದಿ

ಉಡುಪಿ: ಬನ್ನಂಜೆಯ ವ್ಯಕ್ತಿಯೋರ್ವರು ಹೃದಯಾಘಾತದಿಂದ  ಜಿಲ್ಲಾಸ್ಪತ್ರೆಯಲ್ಲಿ ಮೇ.16ರಂದು ಸಾವಪ್ಪಿದ್ದು, ಅವರ ಗಂಟಲು ದ್ರವವನ್ನು ಕೊರೋನ ಪರೀಕ್ಷೆಗಾಗಿ  ಮಂಗಳೂರು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವ್ಯಕ್ತಿ 44ವರ್ಷದವರಾಗಿದ್ದು, ಕಳೆದ ಮೂರು ದಿನಗಳಿಂದ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು.

ಮೇ.16ರಂದು ರಾತ್ರಿ ಎದೆ ನೋವು ಇದ್ದ ಕಾರಣ ಅವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಹೃದಯಾಘಾತದಿಂದ ಅವರು ಸಾವಪ್ಪಿದ್ದಾರೆ.

ವ್ಯಕ್ತಿ ಕೊರೋನ ಸೋಂಕಿತರೊಡನೆ ಸಂಪರ್ಕ ಹೊಂದಿಲ್ಲ. ಹೊರಗೆ ಹೋಗಿರಲಿಲ್ಲ ಎಂಬುದು ಪ್ರಾಥಮಿಕ ತನಿಖೆ ಸಂದರ್ಭ ತಿಳಿದುಬಂದಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

Get real time updates directly on you device, subscribe now.