ಛತ್ತೀಸ್‌ಗಢ ಮೊದಲ ಸಿಎಂ ಅಜಿತ್ ಜೋಗಿ ನಿಧನ

ಇಪ್ಪತ್ತು ವರ್ಷದ ಛತ್ತೀಸ್‌ಗಡ ಇಂದು ನನ್ನಂತೆಯೇ ಆಗಿದೆ ಎಂದು ಪುತ್ರ ಅಮಿತ್ ಜೋಗಿ ಟ್ವೀಟ್ ಮಾಡಿದ್ದಾರೆ.

ಕರಾವಳಿ ಕರ್ನಾಟಕ ವರದಿ
ನವದೆಹಲಿ: ಛತ್ತೀಸ್‌ಗಢದ ಪ್ರಥಮ ಮುಖ್ಯಮಂತ್ರಿ ಅಜಿತ್ ಜೋಗಿ(74) ಇಂದು ಸಂಜೆ 3:30ಗೆ ಕೊನೆಯುಸಿರೆಳೆದಿದ್ದಾರೆ.

ಎರಡು ಬಾರಿ ಹೃದಯ ಸ್ತಂಭನಕ್ಕೆ ಒಳಗಾಗಿದ್ದ ಅಜಿತ್ ಜೋಗಿಯವರನ್ನು ಮೂರು ವಾರಗಳ ಹಿಂದೆ ರಾಯ್ಪುರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ.9ರಂದು ಹೃದಯಸ್ತಂಭನಕ್ಕೆ ಒಳಗಾದ ಜೋಗಿ ವೇಂಟಿಲೇಟರ್‌ ಸಹಾಯದಲ್ಲಿದ್ದರು.

ಇಪ್ಪತ್ತು ವರ್ಷದ ಛತ್ತೀಸ್‌ಗಡ ಇಂದು ನನ್ನಂತೆಯೇ ಆಗಿದೆ ಎಂದು ಪುತ್ರ ಅಮಿತ್ ಜೋಗಿ ಟ್ವೀಟ್ ಮಾಡಿದ್ದಾರೆ.

ಅಜಿತ್ ಜೋಗಿ ಅವರು ಪತ್ನಿ, ಶಾಸಕಿಯಾಗಿರುವ ರೇಣು ಜೋಗಿ ಮತ್ತು ಪುತ್ರ ಅಮಿತ್ ಅವರನ್ನು ಅಗಲಿದ್ದಾರೆ.

ಅಧಿಕಾರಿಯಾಗಿದ್ದ ಜೋಗಿ ಬಳಿಕ ರಾಜಕಾರಣಿಯಾಗಿ ಛತ್ತೀಸ್‌ಗಢ ಅಸ್ತಿತ್ವಕ್ಕೆ ಬಂದ ನಂತರ ನವೆಂಬರ್ 2000 ರಿಂದ 2003 ರ ನವೆಂಬರ್ ವರೆಗೆ ಕಾಂಗ್ರೆಸ್ ಸರ್ಕಾರದ ಮೊದಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

2016ರಲ್ಲಿ ಕಾಂಗ್ರೆಸ್ ತೊರೆದ ಅಜಿತ್ ಜೋಗಿಯವರು ಜನತಾ ಕಾಂಗ್ರೆಸ್ ಛತ್ತೀಸ್‌ಗಢ(ಜೆ) ಪಕ್ಷ ಹುಟ್ಟುಹಾಕಿದ್ದರು.

Get real time updates directly on you device, subscribe now.