ಭಾನುವಾರದ ಕರ್ಪ್ಯೂ ರದ್ದು

ಭಾನುವಾರ ಉಳಿದ ದಿನಗಳಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮ ದೈನಂದಿನ ಚಟುವಟಿಕೆ ಮುಂದುವರಿಸಲು ಅವಕಾಶವಿದೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಜನತೆಯ ಹಿತದೃಷ್ಠಿಯಿಂದ ನಾಳೆ ರಾಜ್ಯದಲ್ಲಿ ಕರ್ಪೂವನ್ನು ರಾಜ್ಯ ಸರಕಾರ ರದ್ದುಗೊಳಿಸಿದೆ. ಭಾನುವಾರ ಕರ್ಪ್ಯೂ ವಿಧಿಸುವುದರಿಂದ ಈಗಾಗಲೇ ಆರಂಭಗೊಂಡಿರುವ ಆರ್ಥಿಕ ಚಟುವಟಿಕೆಗಳಿಗೆ ಹಿನ್ನೆಡೆಯಾಗುತ್ತದೆ. ಭಾನುವಾರ ಒಂದು ದಿನ ಕರ್ಪ್ಯೂ ವಿಧಿಸುವುದರಿಂದ ಕೊರೋನಾ ತಡೆಗಟ್ಟುವಲ್ಲಿ ಮಹತ್ವದ್ದು ಏನೂ ಸಾಧನೆಯಾಗುವುದಿಲ್ಲ ಎಂಬ ಸಂಗತಿ ಸರಕಾರಕ್ಕೆ ಮನವರಿಕೆಯಾಗಿರುವುದರಿಂದ ಭಾನುವಾರದ ಕಂಪ್ಲೀಟ್ ಲಾಕ್‌ಡೌನ್ ಹಿಂತೆಗೆದುಕೊಂಡಿದೆ.

ಭಾನುವಾರ ಎಂದಿನಂತೆ ಸಾರಿಗೆ ಸಂಚಾರ, ಸೆಲೂನುಗಳು, ಪಾರ್ಕ್, ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ. ಜನ ಉಳಿದ ದಿನಗಳಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮ ದೈನಂದಿನ ಚಟುವಟಿಕೆ ಮುಂದುವರಿಸಲು ಅವಕಾಶವಿದೆ.

ಒಂದು ದಿನ ಪೂರ್ತಿ ಕರ್ಪ್ಯೂ ಹಾಕುವುದರಿಂದ ಕೊರೋನ ಪ್ರಕರಣಗಳು ತಡೆಯಬಹುದೇ ಎಂಬ ಬಗ್ಗೆ ಕಳೆದ ಭಾನುವಾರ ಕರ್ಪ್ಯೂ ವಿಧಿಸಿದ್ದ ಹಿನ್ನೆಲೆಯ ಸ್ಥಿತಿಗತಿ ಅಧ್ಯಯನ ಮಾಡಿದಾಗ ಅಂಥ ಯಾವುದೇ ಪ್ರಯೋಜನ ಆಗಿದ್ದು ಸರಕಾರದ ಗಮನಕ್ಕೆ ಬಂದಿಲ್ಲ. ಭಾನುವಾರದ ಮುನ್ನ ಶನಿವಾರವೇ ಜನ ಅಗತ್ಯ ಸಾಮಗ್ರಿ ಖರೀದಿಗೆ ಮುಗಿಬಿದ್ದು ಜನಜಂಗುಳಿ ಹೆಚ್ಚಿದ್ದು, ಸಾಮಾಜಿಕ ಅಂತರ ವ್ಯವಸ್ಥೆಯೇ ಹದ ತಪ್ಪಿದ್ದು ಸರಕಾರದ ಗಮನಕ್ಕೆ ಬಂದಿರುವುದೇ ಈ ನಿರ್ಧಾರಕ್ಕೆ ಕಾರಣ.

Get real time updates directly on you device, subscribe now.