ಕುಂದಾಪುರ: ಕೊರೋನಾ ಸೋಂಕಿನಿಂದ ಮುಕ್ತರಾದ 14 ಮಂದಿ ಬಿಡುಗಡೆ

ಕುಂದಾಪುರ ಎಸಿ ರಾಜು, ಮತ್ತಿತರ ಅಧಿಕಾರಿ ವರ್ಗ ಗುಲಾಬಿ ಗಿಡಗಳನ್ನು, ಚಾಕಲೇಟ್  ನೀಡಿ ಹಾರ್ದಿಕವಾಗಿ ಬೀಳ್ಕೊಟ್ಟರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಹದಿನಾಲ್ಕು ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ.

ಕುಂದಾಪುರ ಎಸಿ ರಾಜು, ಡಿಎಚ್.ಒ ಡಾ. ಸುಧೀರ್‌ಚಂದ್ರ ಸೂಡ, ತಾಲೂಕು ಆರೋಗ್ಯ ಅಧಿಕಾರಿ ಡಾ. ನಾಗಭೂಷಣ ಉಡುಪ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರೊಬರ್ಟ್ ರೆಬೆಲ್ಲೊ, ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ್. ಎಸ್ಸೈ ಹರೀಶ್ ನಾಯ್ಕ್ ಗುಲಾಬಿ ಗಿಡಗಳನ್ನು, ಚಾಕಲೇಟ್ ನೀಡಿ ಹಾರ್ದಿಕವಾಗಿ ಬೀಳ್ಕೊಟ್ಟರು.

ಆಸ್ಪತ್ರೆಯಲ್ಲಿ ಒಟ್ಟು ಎಪ್ಪತ್ತೆಂಟು ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚಿನವರು ಮಹಾರಾಷ್ಟ್ರದಿಂದ ಬಂದವರು.

 

Get real time updates directly on you device, subscribe now.