ಉಡುಪಿಯಲ್ಲಿ 210 ಕೊರೋನಾ ಪ್ರಕರಣ ದೃಢ: ಸಚಿವ ಆರ್. ಅಶೋಕ್

ದೇಶದಾದ್ಯಂತ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವಂತೆ ಉಡುಪಿಯಲ್ಲಿ ಹೆಚ್ಚೆಚ್ಚು ಗಂಟಲು ದ್ರವ ಪರೀಕ್ಷಾ ವರದಿ ಬಂದಂತೆ ಕೊರೋನಾ ಪೊಸಿಟಿವ್ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಇಂದು ಉಡುಪಿಯಲ್ಲಿ 210 ಕೊರೋನ ಪ್ರಕರಣಗಳು ದೃಢಪಟ್ಟಿವೆ ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಮಹಾರಾಷ್ತ್ರದ ಮುಂಬೈ, ಪೂನಾ ಮತ್ತಿತರ ಕಡೆಗಳಿಂದ ಇಪ್ಪತ್ತು ಸಾವಿರ ಮಂದಿ ಉಡುಪಿಗೆ ಬಂದಿದ್ದಾರೆ. ಇವರಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಕೊರೋನ ಸೋಂಕು ದೃಢಪಟ್ಟಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ದೇಶದಾದ್ಯಂತ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವಂತೆ ರಾಜ್ಯದಲ್ಲೂ ಹೆಚ್ಚುತ್ತಿವೆ. ಅದೇ ರೀತಿ ಉಡುಪಿಯಲ್ಲಿ ಹೆಚ್ಚೆಚ್ಚು ಗಂಟಲು ದ್ರವ ಪರೀಕ್ಷಾ ವರದಿ ಬಂದಂತೆ ಕೊರೋನಾ ಪೊಸಿಟಿವ್ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ.

 

Get real time updates directly on you device, subscribe now.