ಉಡುಪಿ ಜಿಲ್ಲೆಯಲ್ಲಿ 150ಪಾಸಿಟಿವ್ ಪ್ರಕರಣ: ಭಯಪಡುವ ಅಗತ್ಯವಿಲ್ಲ, ಡಿಸಿ ಜಗದೀಶ್ ಅಭಯ

ಮೊದಲು ಟೆಸ್ಟ್‌ಗಳು ನಿಧಾನವಾಗಿ ಆಗುತ್ತಿದ್ದವು. ಇನ್ನೂರು ಮುನ್ನೂರು ಟೆಸ್ಟ್ ಆಗುತ್ತಿದ್ದು, ದಿನಕ್ಕೆ ಕೆಲವು ಮಂದಿ ಮಾತ್ರ ಕೋವಿಡ್ ಪಾಸಿಟಿವ್ ಆಗುತ್ತಿದ್ದರು. ಈಗ ಪರೀಕ್ಷೆಗಳ ವೇಗ ಹೆಚ್ಚಿದೆ. ಫಲಿತಾಂಶಗಳು ಕ್ಷಿಪ್ರಗತಿಯಲ್ಲಿ ಬರುತ್ತಿವೆ.

ಒಟ್ಟು 410 ಮಂದಿಯಲ್ಲಿ ಇಬ್ಬರು ಮಾತ್ರ ಐಸಿಯುನಲ್ಲಿದ್ದಾರೆ. ಇವರು ಕೂಡ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಇಂದು ಜಿಲ್ಲೆಯಲ್ಲಿ ಒಂದೇ ದಿನ 150ಪ್ರಕರಣಗಳಲ್ಲಿ ಕೋವಿಡ್ ಸೋಂಕು ದೃಢವಾಗಿದೆ ಎಂಬ ಕಾರಣಕ್ಕೆ ಯಾರೂ ಭಯ ಪಡುವ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಡಿಸಿ ಜಗದೀಶ್ ಜನರಿಗೆ ಅಭಯ ನೀಡಿದ್ದಾರೆ.

ಮೊದಲು ಟೆಸ್ಟ್‌ಗಳು ನಿಧಾನವಾಗಿ ಆಗುತ್ತಿದ್ದವು. ಇನ್ನೂರು ಮುನ್ನೂರು ಟೆಸ್ಟ್ ಆಗುತ್ತಿದ್ದು, ದಿನಕ್ಕೆ ಕೆಲವು ಮಂದಿ ಮಾತ್ರ ಕೋವಿಡ್ ಪಾಸಿಟಿವ್ ಆಗುತ್ತಿದ್ದರು. ಈಗ ಪರೀಕ್ಷೆಗಳ ವೇಗ ಹೆಚ್ಚಿದೆ. ಫಲಿತಾಂಶಗಳು ಕ್ಷಿಪ್ರಗತಿಯಲ್ಲಿ ಬರುತ್ತಿವೆ. ಒಂದೇ ಸಾರಿ ಎರಡು ಸಾವಿರ ಜನರ ಪರೀಕ್ಷಾ ವರದಿ ಬಂದಿದ್ದು, ಈಗ ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿಗಳು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಆದರೆ ಜನ ಭಯ ಪಡುವಂಥದ್ದೇನಿಲ್ಲ. ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರಾದ ಒಟ್ಟು 410 ಮಂದಿಯಲ್ಲಿ ಇಬ್ಬರು ಮಾತ್ರ ಐಸಿಯುನಲ್ಲಿದ್ದಾರೆ. ಇವರು ಕೂಡ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಎಲ್ಲರಿಗೂ ಚಿಕಿತ್ಸೆಗೆ ಅವಕಾಶ ಬೆಡ್ ಲಭ್ಯತೆ ಇದೆ. ಯಾರೂ ಚಿಂತೆ ಮಾಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಭರವಸೆಯ ಮಾತುಗಳನ್ನಾಡಿದ್ದಾರೆ.

Get real time updates directly on you device, subscribe now.