ಉಡುಪಿ ಜಿಲ್ಲಾಡಳಿತದಿಂದ ಕೆಲಸ ಆಗಬೇಕೆ? ಪೋನ್ ಮಾಡಿದರೆ ಸಾಕು: ಜಿಲ್ಲಾಧಿಕಾರಿ

ಅತೀ ಅಗತ್ಯದ ಸಂದರ್ಭ ಮಾತ್ರ ರೋಗ ಲಕ್ಷಣಗಳಿಲ್ಲದಿದ್ದರೆ ಡಿಸಿ ಕಚೇರಿಗೆ ಭೇಟಿ ನೀಡಬಹುದು ಎಂದು ಡಿಸಿ ಹೇಳಿದ್ದಾರೆ.

ಸಾರ್ವಜನಿಕ ಸ್ಪಂದನ ನೋಡಿಕೊಂಡು ಸೇವೆಯನ್ನು ಇನ್ನಷ್ಟು ಸುಧಾರಿಸಲು ಸಾಧ್ಯವಾಗುತ್ತದೆ ಎಂಬ ಆಶಯ ಅವರು ವ್ಯಕ್ತಪಡಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಕಂಟೈನ್ಮೆಂಟ್ ಝೋನ್‌ಗಳು, ಹೋಮ್ ಕ್ವಾರಂಟೈನ್ ಇತ್ಯಾದಿ ಆಗುತ್ತಿರುವ ಸಂದರ್ಭದಲ್ಲಿ ಜನರಲ್ಲಿ ಕೋವಿಡ್ ಬಗ್ಗೆ ಆತಂಕ ಇರುತ್ತದೆ. ಆದ್ದರಿಂದ ಕೋವಿಡ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಕಾರ್ಯವೈಖರಿಯಲ್ಲಿ ಬದಲಾವಣೆ ಅಳವಡಿಸಿದೆ ಎಂದು ಡಿಸಿ ಜಗದೀಶ್ ಹೇಳಿದ್ದಾರೆ.

ಸಾರ್ವಜನಿಕರು ಸರಕಾರಿ ಕಚೇರಿಗಳಿಗೆ ಭೇಟಿ ನೀಡುವ ಬದಲು ಮೊಬೈಲ್ ಕರೆ ಮೂಲಕವೇ ತಮ್ಮ ಕೆಲಸ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಪಂದನ ಈ ಕುರಿತು ಹೇಗಿರುತ್ತದೆ ಎಂದು ನೋಡಿಕೊಂಡು ಸೇವೆಯನ್ನು ಇನ್ನಷ್ಟು ಸುಧಾರಿಸಲು ಸಾಧ್ಯವಾಗುತ್ತದೆ ಎಂಬ ಆಶಯ ಅವರು ವ್ಯಕ್ತಪಡಿಸಿದ್ದಾರೆ.

ಅತೀ ಅಗತ್ಯದ ಸಂದರ್ಭ ಮಾತ್ರ ರೋಗ ಲಕ್ಷಣಗಳಿಲ್ಲದಿದ್ದರೆ ಡಿಸಿ ಕಚೇರಿಗೆ ಭೇಟಿ ನೀಡಬಹುದು ಎಂದು ಡಿಸಿ ಹೇಳಿದ್ದಾರೆ.

0820-2574931, 2571500  ಸಹಾಯವಾಣಿಗೆ ಕರೆ ಮಾಡಿ ಸಾರ್ವಜನಿಕರು ಆಗಬೇಕಾದ ಕೆಲಸದ ಮಾಹಿತಿ ನೀಡಬೇಕು. ದಾಖಲಾತಿ ಪಡೆಯಲು ಅರ್ಜಿ ಸಲ್ಲಿಸಿದ್ದರೆ ಅದರ ಸ್ಥಿಗತಿ ವಿವರ ಪಡೆಯಬಹುದಾಗಿದೆ.

ವಾಟ್ಸ್ಯಾಪ್ ಸಂಖ್ಯೆ 9880831516 ಗೆ ಪೂರಕ ಮಾಹಿತಿಗೆ ಸಂಪರ್ಕಿಸಬಹುದು. Udupidc.helpline@gmail.com ಮೂಲಕ ಸೇವೆ ಪಡೆಯಬಹುದಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

Get real time updates directly on you device, subscribe now.