ಬೆಳ್ತಂಗಡಿ: ಪುತ್ರರಿಂದ ತಂದೆಯ ಕೊಲೆ

ಕರಾವಳಿ ಕರ್ನಾಟಕ ವರದಿ
ಬೆಳ್ತಂಗಡಿ: ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿ ತಂದೆಯನ್ನೇ ಮಕ್ಕಳು ಕತ್ತಿಯಿಂದ ಕಡಿದು ಕೊಲೆಗೈದ ಘಟನೆ ರವಿವಾರ ಮಧ್ಯರಾತ್ರಿ ನಡೆದಿದೆ.

ಧರ್ಣಪ್ಪ ಪೂಜಾರಿ(60) ಅವರನ್ನು ಪುತ್ರರಾದ ಮೋನಪ್ಪ ಮತ್ತು ನವೀನ ಎಂಬವರು ಕೊಲೆಗೈದಿದ್ದು, ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಧರ್ಣಪ್ಪ ಪೂಜಾರಿಯವರು ಮನೆಯ ತೋಟದ  ತೆಂಗಿನಕಾಯಿ ಮಾರುತ್ತಾರೆ ಎಂಬ ವಿಷಯಕ್ಕೆ ಸಂಬಂಧಿಸಿ ಜಗಳವಾಡಿದ ಪುತ್ರರು ತಂದೆಗೆ ಕತ್ತಿಯಿಂದ ಮಾರಣಾಂತಿಕ ಹಲ್ಲೆಗೈದಿದ್ದರು ಎನ್ನಲಾಗಿದೆ. ಗಂಭೀರ ಗಾಯಗೊಂಡ ಧರ್ಣಪ್ಪ ಅವರು ಸ್ಥಳದಲ್ಲೇ ಸಾವಪ್ಪಿದ್ದಾರೆ.

Get real time updates directly on you device, subscribe now.