ಕಾಸರಗೋಡು: ಗಲ್ಫ್‌ನಿಂದ ಬಂದ ವ್ಯಕ್ತಿ ಹೋಂಕ್ವಾರಂಟೈನ್‌ನಲ್ಲಿ ಮೃತ್ಯು

ಗಂಟಲುದ್ರವ ಪರೀಕ್ಷೆ ವರದಿ ಇಂದು ಬರುವ ನಿರೀಕ್ಷೆ.

ಕರಾವಳಿ ಕರ್ನಾಟಕ ವರದಿ
ಕಾಸರಗೋಡು: ಗಲ್ಫ್‌ನಿಂದ ಬಂದು ಹೋಂಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉದುಮದಲ್ಲಿ ವರದಿಯಾಗಿದೆ.

ಉದುಮ ಸೌತ್ ಕರಿಪ್ಪೊಡಿಯ ಅಬ್ದುರ್ರಹ್ಮಾನ್(54) ಅವರು ಸೋಮವಾರ ತಡರಾತ್ರಿ ಮೃತಪಟ್ಟಿದ್ದಾರೆ.

ಪುತ್ರ ಜಿಶಾದ್ ಅವರೊಂದಿಗೆ ಶನಿವಾರ ಗಲ್ಫ್‌ನಿಂದ ಬಂದಿದ್ದರು. ಇವರ ಗಂಟಲು ದ್ರವ ಪರೀಕ್ಷೆಗಾಗಿ ಸಂಗ್ರಹಿಸಿದ ಬಳಿಕ ಉದುಮ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮನೆಗೆ ತೆರಳಿದ್ದರು. ಸೋಮವಾರ ಸಂಜೆ ಉಸಿರಾಟದ ತೊಂದರೆಯಿಂದ ಬಳಲಿದ ಅಬ್ದುರ್ರಹ್ಮಾನ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಸಾವಪ್ಪಿದ್ದಾರೆ.

ಗಂಟಲುದ್ರವ ಪರೀಕ್ಷೆ ವರದಿ ಇಂದು ಬರುವ ನಿರೀಕ್ಷೆ ಇದೆ.

 

Get real time updates directly on you device, subscribe now.