ಶಿವಮೊಗ್ಗ: ಕೊರೋನಾ ವೈರಸ್‌ಗೆ ಮೊದಲ ಸಾವು-ಮಹಿಳೆ ಮೃತ್ಯು

ದಾವಣಗೆರೆಯ ಮಗಳ ಮನೆಗೆ ಹೋಗಿಬಂದ ಬಳಿಕ ಅನಾರೋಗ್ಯ ಉಲ್ಭಣಿಸಿತ್ತು.

ಕರಾವಳಿ ಕರ್ನಾಟಕ ವರದಿ
ಶಿವಮೊಗ್ಗ: ಚನ್ನಗಿರಿಯ ಮಹಿಳೆಯೋರ್ವರು ಕೊರೋನಾ ಸೋಂಕಿನಿಂದ ಸಾವಪ್ಪಿರುವ ಸಂಗತಿ ವರದಿಯಾಗಿದೆ. ಮಂಗಳವಾರ ರಾತ್ರಿ 1.30ಕ್ಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಐವತ್ತಾರು ವರ್ಷದ ದಾವಣಗೆರೆ ಜಿಲ್ಲೆಯ ಮಹಿಳೆ ಮೂರು ದಿನಗಳ ಹಿಂದೆ ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಸಾವಿನ ನಂತರ ಕೊರೋನ ಸೋಂಕು ಇರುವುದು ದೃಢಪಟ್ಟಿದೆ.

ಮೂಲವ್ಯಾಧಿ ಮತ್ತು ಶ್ವಾಸಕೋಶದ ಸಮಸ್ಯೆಯಿಂದ ಮಹಿಳೆ ಬಳಲಿದ್ದರು. ದಾವಣಗೆರೆಯಲ್ಲಿ ಮಗಳ ಮನೆಗೆ ಹೋಗಿಬಂದ ಬಳಿಕ ಅನಾರೋಗ್ಯ ಉಲ್ಭಣಿಸಿತ್ತು.

Get real time updates directly on you device, subscribe now.