ಕಾರ್ಕಳದ ಕೊರೋನಾ ಸೋಂಕಿತೆಗೆ ಸಿಝೇರಿಯನ್ ಹೆರಿಗೆ ಯಶಸ್ವಿ: ವೈದ್ಯರ ತಂಡಕ್ಕೆ ಡಿಸಿ ಅಭಿನಂದನೆ

ಜಿಲ್ಲೆಯಲ್ಲಿ ಸೋಂಕಿತ ಗರ್ಭಿಣಿಗೆ ನಡೆದ ಮೊದಲ ಶಸ್ತ್ರಚಿಕಿತ್ಸೆ ಇದಾಗಿದ್ದು, ಯಶಸ್ವಿಯಾಗಿದೆ.

ಮಗು ಆರೋಗ್ಯವಂತವಾಗಿದೆ ಎಂದು ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ ಭಟ್ ಅವರು ತಿಳಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಟಿ.ಎಂ.ಎ.ಪೈ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತ ಮಹಿಳೆ ಮಗುವಿಗೆ ಜನ್ಮ ನೀಡಿದ್ದು ಗಂಡು ಮಗು ಆರೋಗ್ಯವಾಗಿದೆ. ಬುಧವಾರ ತುರ್ತು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಯಿತು.

ವೈದ್ಯರ ತಂಡಕ್ಕೆ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ‘ತುಂಬು ಹೃದಯದ ಅಭಿನಂದನೆಗಳು ನಿಮಗೆ ಮತ್ತು ನಿಮ್ಮ ತಂಡಕ್ಕೆ’ ಎಂದು ಅಭಿನಂದನೆ ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿತ ಗರ್ಭಿಣಿಗೆ ನಡೆದ ಮೊದಲ ಶಸ್ತ್ರಚಿಕಿತ್ಸೆ ಇದಾಗಿದ್ದು, ಯಶಸ್ವಿಯಾಗಿದೆ. ಮಗುವಿಗೆ ಕೋವಿಡ್ ಸೋಂಕು ತಗುಲದಂತೆ ವೈದ್ಯರು ಎಚ್ಚರಿಕೆ ವಹಿಸಿದ್ದು, ಮಗುವಿನ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ವರದಿ ನೆಗೆಟಿವ್ ಬಂದ ಬಳಿಕ ತಾಯಿಯ ಜೊತೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಕಾರ್ಕಳದ ಮಹಿಳೆ ಇಪ್ಪತ್ತೆರಡು ವರ್ಷದವರಾಗಿದ್ದು, ಜೂ.16ರಂದು ಆಸ್ಪತ್ರೆಗೆ ದಾಖಲಾಗಿದ್ದರು. ತಾಯಿ ಚೇತರಿಸಿಕೊಳ್ಳುತ್ತಿದ್ದು, ಮಗು ಆರೋಗ್ಯವಂತವಾಗಿದೆ ಎಂದು ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ ಭಟ್ ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರದಿಂದ ಬಂದಿದ್ದವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕಾರ್ಕಳದ ತುಂಬು ಗರ್ಭಿಣಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಿಝೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ.

ಪ್ರಸೂತಿ ತಜ್ನೆ ಡಾ. ಶಶಿಕಲಾ ಕೆ. ಭಟ್, ಡಾ. ಸುರಭಿ ಸಿನ್ಹಾ, ಅರಿವಳಿಕೆ ತಜ್ನ ಡಾ. ರೋಶನ್ ಶೆಟ್ಟಿಯವರ ತಂಡಕ್ಕೆ ದಾದಿಯರಾದ ವೆರೊನಿಕಾ, ಅಶ್ವಿನಿ, ಜಯಶ್ರೀ ನೆರವು ನೀಡಿದ್ದಾರೆ. ಡಾ. ಆಶಿಷ್ ಗುಪ್ತಾ, ಡಾ. ಚೈತನ್ಯ ಮಗುವಿನ ಆರೈಕೆ ಮಾಡುತ್ತಿದ್ದಾರೆ ಎಂದು ವಿವರ ನೀಡಿದರು.

ಮಗುವಿಗೆ ಐದು ದಿನ ಬಳಿಕ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ತಾಯಿಗೆ ಜೂ.22ರಂದು ನಡೆಸಲಾಗುತ್ತದೆ. ಡಾ.ಟಿ.ಎಂ.ಎ.ಪೈ ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

Get real time updates directly on you device, subscribe now.