ಬೈಕ್ ವ್ಹೀಲಿಂಗ್ ಸಂದರ್ಭ ಅಪಘಾತ: ಮೂವರು ಯುವಕರು ಮೃತ್ಯು

ಜಿಕೆವಿಕೆ ಮುಂಭಾಗ ಜಕ್ಕೂರು ಏರೋಡ್ರಮ್ ಬಳಿ ವ್ಹೀಲಿಂಗ್ ಮಾಡುವ ವೇಳೆ ಯುವಕರು ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಯಲಹಂಕ ರಾ.ಹೆ.7ರಲ್ಲಿ ಜಿಕೆವಿಕೆ ಮುಂಭಾಗ ನಡೆದ ಅಪಘಾತದಲ್ಲಿ ಮೂವರು ಯುವಕರು ಮೃತಪಟ್ಟ ಘಟನೆ ನಡೆದಿದೆ.

ನಾಗವಾರ ಸಮೀಪದ ಗೋವಿಂದಪುರದ ಮಹಮ್ಮದ್  ಆದಿಲ್ ಆಯಾನ್ (16), ಮಾಜ್ ಅಹಮ್ಮದ್ ಖಾನ್(17) ಹಾಗೂ ಸಯ್ಯದ್ ರಿಯಾಜ್ (22) ಅಪಘಾತದಲ್ಲಿ ಮೃತಟ್ಟಿದ್ದಾರೆ.

ಜಿಕೆವಿಕೆ ಮುಂಭಾಗ ಜಕ್ಕೂರು ಏರೋಡ್ರಮ್ ಬಳಿ ವ್ಹೀಲಿಂಗ್ ಮಾಡುವ ವೇಳೆ ಯುವಕರು ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದೆ.  ಬೈಕ್ ಗಳು ಮುಖಾಮುಖಿ ಢಿಕ್ಕಿಯಾದಾಗ ಯುವಕರ ತಲೆಗೆ ಗಂಭೀರ ಗಾಯವಾಗಿತ್ತು. ಇವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಯುವಕ ಆಸ್ಪತ್ರೆಯಲ್ಲಿ ಸಾವಪ್ಪಿದ್ದಾರೆ.

ಯಲಹಂಕ ಸಂಚಾರಿ ಪೊಲೀಸರು ಭೇಟಿ ನೀಡಿದ್ದರು. ಘಟನೆ ಸಂಬಂಧ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿರಿಸಲಾಗಿದೆ.

Get real time updates directly on you device, subscribe now.