ಬೈಂದೂರು ಪೊಲೀಸ್ ಸಿಬಂದಿ ಓರ್ವರಿಗೆ ಕೊರೋನಾ ಸೋಂಕು: ಎ‌ಎಸ್‌ಪಿ ಹರಿರಾಂ ಶಂಕರ್

ಬೈಂದೂರು ಎಸ್ಸೈ ಮತ್ತು ವೃತ್ತ ನಿರೀಕ್ಷಕರ ಕಚೇರಿಗಳನ್ನು ಎರಡು ದಿನ ಕಾಲ ಸ್ಯಾನಿಟೈಶೇಷನ್ ಮಾಡುವ ಸಲುವಾಗಿ ಮುಚ್ಚಲಾಗುತ್ತದೆ

ವೃತ್ತ ನಿರೀಕ್ಷಕರ ಹಳೆ ಕಚೇರಿಯಲ್ಲಿ ಠಾಣೆಯು ಕಾರ್ಯಾಚರಿಸಲಿದೆ.

ಕರಾವಳಿ ಕರ್ನಾಟಕ ವರದಿ
ಬೈಂದೂರು: ಬೈಂದೂರು ಪೊಲೀಸ್ ಕಾನ್ಶ್ಟೇಬಲ್ ಓರ್ವರಲ್ಲಿ ಆದಿತ್ಯವಾರ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಎ‍ಎಸ್‌ಪಿ ಹರಿರಾಂ ಶಂಕರ್ ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಬೈಂದೂರು ಎಸ್ಸೈ ಮತ್ತು ವೃತ್ತ ನಿರೀಕ್ಷಕರ ಕಚೇರಿಗಳನ್ನು ಎರಡು ದಿನ ಕಾಲ ಸ್ಯಾನಿಟೈಶೇಷನ್ ಮಾಡುವ ಸಲುವಾಗಿ ಮುಚ್ಚಲಾಗುತ್ತದೆ ಎಂದು ತಿಳಿಸಿದ್ದಾರೆ.

ವೃತ್ತ ನಿರೀಕ್ಷಕರ ಹಳೆ ಕಚೇರಿಯಲ್ಲಿ ಠಾಣೆಯು ಕಾರ್ಯಾಚರಿಸಲಿದೆ. ಎಲ್ಲ ಸಿಬಂದಿಗಳನ್ನು ಹದಿನಾಲ್ಕು ದಿನ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಏಳು ದಿನಗಳ ಬಳಿಕ ಸೋಂಕಿತ ಪೊಲೀಸ್ ಸಿಬಂದಿಯ ಪ್ರಾಥಮಿಕ ಸಂಪರ್ಕ ಪತ್ತೆ ಹಚ್ಚಲಾಗುವುದೆಂದು ಎ‌ಎಸ್‌ಪಿ ತಿಳಿಸಿದ್ದಾರೆ.

Get real time updates directly on you device, subscribe now.