ಬಾರ್ಕೂರು: ಜೀವದ ಹಂಗು ತೊರೆದು ಚೌಳಿಕೆರೆಗೆ ಜಿಗಿದು ಯುವತಿಯನ್ನು ಮೇಲೆತ್ತಿದ ಯುವಕರು

‘ಕರಾವಳಿ ಕರ್ನಾಟಕ’ ಓದುಗ ಭಾಸ್ಕರ ಪೂಜಾರಿಯವರು ಈ ಯುವಕರ ಸಾಹಸದ ಬಗ್ಗೆ ಗಮನ ಸೆಳೆದಿದ್ದಾರೆ.

ಯುವತಿಯ ಜೀವ ಉಳಿಸಿದ ಬಾಲಕಿ ನಮನ ಅವರ ಸಕಾಲಿಕ ಪ್ರಥಮ ಚಿಕಿತ್ಸೆಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ. ಯುವತಿಯನ್ನು ದಡಕ್ಕೆ ತಂದ ಯುವಕರ ಸಾಹಸ ಕೂಡ ಊರಿನ ಜನರಲ್ಲಿ ಮನೆಮಾತಾಗಿದೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಜೂ.21ರಂದು ಬಾರ್ಕೂರು ಚೌಳಿ ಕೆರೆಗೆ ಕಾರು ಧುಮುಕಿದ ಸಂದರ್ಭ ಕಾರಿನಲ್ಲಿದ್ದ ಇಬ್ಬರನ್ನು ತಮ್ಮ ಜೀವದ ಹಂಗು ತೊರೆದು ಮೇಲಕ್ಕೆತ್ತಿ ತಂದ ಇಬ್ಬರು ಯುವಕರ ಸಾಹಸ ಊರಿಡೀ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಪ್ರದೀಪ್ ದೇವಾಡಿಗ ಮತ್ತು ಪ್ರವೀಣ್ ಪೂಜಾರಿ ಎಂಬ ಸಾಹಸಿ ಯುವಕರು ನೀರಿನಿಂದ ತುಂಬಿದ ಚೌಳಿ ಕೆರೆಗೆ ತಕ್ಷಣ ಧುಮುಕಿದ್ದಾರೆ.

ಉದ್ಯಮಿ ಸಂತೋಷ ಶೆಟ್ಟಿಯವರ ಜೀವ ಉಳಿಸಲಾಗಲಿಲ್ಲ. ಆದರೆ ಕಾರಿನಲ್ಲಿದ್ದ ಯುವತಿ ಶ್ವೇತಾ ಅವರನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ.

ನಮನ

ಈ ಸಂದರ್ಭ ಅಲ್ಲಿದ್ದ ನಮನ ಎಂಬ ಹದಿನೈದು ವರ್ಷದ ಬಾಲಕಿ ತಕ್ಷಣ ಶ್ವೇತಾಗೆ ಪ್ರಥಮ ಚಿಕಿತ್ಸೆ ನೀಡಿದ್ದರಿಂದ ಆಕೆಯ ಜೀವ ಉಳಿದಿದೆ.

ಬಾಲಕಿ ನಮನ ಅವರ ಸಕಾಲಿಕ ಪ್ರಥಮ ಚಿಕಿತ್ಸೆಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ. ಯುವತಿಯನ್ನು ದಡಕ್ಕೆ ತಂದ ಯುವಕರ ಸಾಹಸ ಕೂಡ ಊರಿನ ಜನರಲ್ಲಿ ಮನೆಮಾತಾಗಿದೆ.

‘ಕರಾವಳಿ ಕರ್ನಾಟಕ’ ಓದುಗ ಭಾಸ್ಕರ ಪೂಜಾರಿಯವರು ಈ ಯುವಕರ ಸಾಹಸದ ಬಗ್ಗೆ ಗಮನ ಸೆಳೆದಿದ್ದಾರೆ.

ಜನರು ಇನ್ನೊಬ್ಬರ ಬಗ್ಗೆ ತಲೆ ಕೆಡಿಸಿಕೊಳ್ಳದ ಈ ದಿನಗಳಲ್ಲಿ ತಮ್ಮ ಜೀವದ ಹಂಗನ್ನೇ ತೊರೆದು ತುಂಬಿದ ಕೆರೆಗೆ ಜಿಗಿದು ಎರಡು ಜೀವಗಳನ್ನು ರಕ್ಷಿಸಲು ಹೆಣಗಿದ ವೀಣಾ ಜುವೆಲ್ಲರ್ಸ್ ಪ್ರದೀಪ್ ದೇವಾಡಿಗ ಮತ್ತು ಮೊಬೈಲ್ ಉದ್ಯಮದಲ್ಲಿನ ಪ್ರವೀಣ್ ಪೂಜಾರಿ  ಮಾನವೀಯತೆ ಮೆರೆದಿರುವುದು ಮಹತ್ವದ ಸಂಗತಿಯಾಗಿದೆ.

Get real time updates directly on you device, subscribe now.