ಬೆಂಗಳೂರು: ಕೊರೋನಾ ಸೋಂಕಿತ ಪೊಲೀಸ್ ಅಧಿಕಾರಿ ಬಸ್ಸಿನಲ್ಲೇ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತಂಕಿತರಾದ ಪೊಲೀಸ್ ಕಾನ್‌ಸ್ಟೇಬಲ್ ಓರ್ವರು ಕೆ‌ಎಸ್‌ಆರ್ಪಿ ಬಸ್ಸಿನಲ್ಲೇ ನೇಣು ಬಿಗಿದು ಆತ್ಮಹತ್ಯೆಗೈದ ಸಂಗತಿ ವರದಿಯಾಗಿದೆ.

ಐವತ್ತು ವರ್ಷದ ಕೆ‌ಎಸ್‍ಆರ್‌ಪಿ ಸಿಬಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಬಸ್ಸಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಹೆಡ್ ಕಾನ್‌ಸ್ಟೇಬಲ್ ನೇಣು ಹಾಕಿಕೊಂಡಿದ್ದಾರೆ.

Get real time updates directly on you device, subscribe now.