ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ಗೆ ಕೆನಡಾ ವಿವಿಯ ಗೌರವ ಡಾಕ್ಟರೇಟ್

ಸಾವಿರಾರು ಮುಸ್ಲಿಮರನ್ನು ಬಲಿ ಪಡೆದ ಗುಜರಾತ್ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ದಿಟ್ಟ ಹೋರಾಟ ನೀಡಿದ ಖ್ಯಾತಿ.

ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಸಾವಿರಾರು ಮುಸ್ಲಿಮರನ್ನು ಬಲಿ ಪಡೆದ ಗುಜರಾತ್ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ದಿಟ್ಟ ಹೋರಾಟ ನೀಡಿದ ಖ್ಯಾತಿಯ ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಕೆನಡಾದ ಯುನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಬಂದಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ ಮುಂದೂಡಲಾಗಿದೆ.

ಪತ್ರಕರ್ತೆ, ನಾಗರಿಕ ಮತ್ತು ಅಲ್ಪಸಂಖ್ಯಾತ ಹಕ್ಕುಗಳ ಹೋರಾಟಗಾರ್ತಿಯಾಗಿ ಖ್ಯಾತಿವೆತ್ತ ತೀಸ್ತಾ ಸೆಟಲ್ವಾಡ್, ಕೆನಡಾದ ನಟ ಟಂಟು ಕಾರ್ಡಿನಲ್, ಖ್ಯಾತ ಲೇಖಕ ಲಾರೆನ್ಸ್ ಹಿಲ್, ಪಿಯಾನೊ ವಾದಕ ಡೌಗ್ ಜಾನ್ಸನ್ ಸೇರಿದಂತೆ ಹತ್ತು ಮಂದಿಯನ್ನು ಈ ವರ್ಷದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿಗೆ ವಿಶ್ವವಿದ್ಯಾಲಯವು ಆಯ್ಕೆ ಮಾಡಿದೆ.

Get real time updates directly on you device, subscribe now.