ಮಡಿಕೇರಿ: ನಿವೃತ್ತ ಎ‌ಎಸ್‌ಐ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ
ಮಡಿಕೇರಿ: ನಿವೃತ್ತ ಎಎಸ್‍ಐ ಓರ್ವರು ಮನೆಯಲ್ಲೇ ಒಂಟಿ ನಳಿಕೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ಸಮೀಪ ಮಾದೇಗೋಡುವಿನಲ್ಲಿ ಬೆಳಿಗ್ಗೆ ನಡೆದಿದೆ.

ಮಾದೇಗೋಡುವಿನ ಎಂ.ಎಸ್.ಈರಪ್ಪ(60) ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಪೊಲೀಸ್ ಅಧಿಕಾರಿ. ಈರಪ್ಪ ಅವರು ಪತ್ನಿ, ಪುತ್ರಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಒಂದು ವರ್ಷದಿಂದ ಶನಿವಾರಸಂತೆ ಪೋಲಿಸ್ ಠಾಣೆಯಲ್ಲಿ ಎಎಸ್‍ಐ ಆಗಿ ಸೇವೆ ಸಲ್ಲಿಸುತ್ತಿದ್ದ ಈರಪ್ಪ, ಮೇ 30 ರಂದು ನಿವೃತ್ತಿ ಹೊಂದಿದ್ದರು.

ಶನಿವಾರಸಂತೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.

 

Get real time updates directly on you device, subscribe now.