ಭಾಗಮಂಡಲ: ತ್ರಿವೇಣಿ ಸಂಗಮದಲ್ಲಿ ಯುವಕ ಮೃತ್ಯು

ಸಹೋದರ ಮಣಿಕಂಠ ಎಂಬವರು ಮುಳುಗುವುದನ್ನು ಕಂಡು ಅವರನ್ನು ರಕ್ಷಿಸಲು ಯತ್ನಿಸಿದ ಸುಬ್ರಮಣಿ ಸಾವಪ್ಪಿದ್ದಾರೆ.

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ವಾರ್ಷಿಕ ಪೂಜೆಗೆ ಕುಟುಂಬದೊಂದಿಗೆ ಬಂದಿದ್ದ ಯುವಕ.

ಕರಾವಳಿ ಕರ್ನಾಟಕ ವರದಿ
ಮಡಿಕೇರಿ: ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ವಾರ್ಷಿಕ ಪೂಜೆಗೆ ಕುಟುಂಬದೊಂದಿಗೆ ಬಂದಿದ್ದ ಯುವಕನೋರ್ವ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೃತರನ್ನು ಮೈಸೂರು ಜಿಲ್ಲೆಯ ಹುಣಸೂರಿನ ಸುಬ್ರಮಣಿ(30) ಎಂದು ಗುರುತಿಸಲಾಗಿದೆ. ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಸ್ನಾನ ಮಾಡುವ ಸಂದರ್ಭ ನೀರಿನಲ್ಲಿ ಸಹೋದರ ಮಣಿಕಂಠ ಎಂಬವರು ಮುಳುಗುವುದನ್ನು ಕಂಡು ಅವರನ್ನು ರಕ್ಷಿಸಲು ಯತ್ನಿಸಿದ ಸುಬ್ರಮಣಿ ಸಾವಪ್ಪಿದ್ದಾರೆ. ಯಶೋಧಾ ಮತ್ತು ಪ್ರಮೀಳಾ ಎಂಬವರನ್ನು ಸ್ಥಳೀಯರಾದ ಗೋಪಾಲ ಎಂಬವರು ರಕ್ಷಿಸಿದ್ದಾರೆ. ಮಹಿಳೆಯರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಮೃತ ಸುಬ್ರಮಣಿ ಮತ್ತು ಮಣಿಕಂಠ ಹುಣಸೂರಿನಲ್ಲಿ ಮೆಕ್ಯಾನಿಕ್‌ಗಳಾಗಿದ್ದರು.

ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.