ಬಾರ್ಕೂರು: ಯುವತಿಯನ್ನು ಸಾವಿನ ದವಡೆಯಿಂದ ಪಾರುಮಾಡಿದ ಯುವಕರಿಗೆ ಸನ್ಮಾನ

ಯುವಕರ ಸಕಾಲಿಕ ಪ್ರಯತ್ನದಿಂದ ಯುವತಿಯನ್ನು ತಕ್ಷಣ ಕೆರೆಯೊಳಗಿದ್ದ ಕಾರಿನಿಂದ ಮೇಲಕ್ಕೆತ್ತುವುದು ಸಾಧ್ಯವಾಗಿತ್ತು.

ಸಕಾಲಕ್ಕೆ ಯುವತಿಯನ್ನು ಮೇಲಕ್ಕೆತ್ತಿದ ಯುವಕರ ಶ್ರಮ ಮತ್ತು ತಕ್ಷಣ ನೀಡಿದ ಪ್ರಥಮ ಚಿಕಿತ್ಸೆಯಿಂದ ಸಾವಿನ ದವಡೆಯಿಂದ ಯುವತಿಯ ಜೀವ ಉಳಿದಿತ್ತು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಬಾರ್ಕೂರು ಚೌಳಿಕೆರೆಗೆ ಕಾರು ಉರುಳಿದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಉದ್ಯಮಿ ಮತ್ತು ಯುವತಿಯ ಜೀವ ರಕ್ಷಿಸಲು ಹೆಣಗಿದ ಇಬ್ಬರು ಸಾಹಸಿ ಯುವಕರಿಗೆ ವಕ್ವಾಡಿ ಯುವ ಶಕ್ತಿ ಮಿತ್ರ ಮಂಡಳಿ ಹಾಗೂ ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು.

ಬಾರ್ಕೂರು ಸದಾ ನೆನಪಿಟ್ಟುಕೊಳ್ಳುವಂಥ ಅಪರೂಪದ ಮಾನವೀಯತೆ ಮತ್ತು ಸಾಹಸ ಮನೋಭಾವ ತೋರಿದ ಯುವಕರಾದ ಪ್ರದೀಪ್ ದೇವಾಡಿಗ ಮತ್ತು ಪ್ರವೀಣ್ ಪೂಜಾರಿಯವರನ್ನು ವಕ್ವಾಡಿ ಯುವ ಶಕ್ತಿ ಮಿತ್ರ ಮಂಡಳಿ ಸನ್ಮಾನಿಸಿತು.

ಯುವಕರ ಸಕಾಲಿಕ ಪ್ರಯತ್ನದಿಂದ ಯುವತಿಯನ್ನು ತಕ್ಷಣ ಕೆರೆಯೊಳಗಿದ್ದ ಕಾರಿನಿಂದ ಮೇಲಕ್ಕೆತ್ತುವುದು ಸಾಧ್ಯವಾಗಿತ್ತು. ಯುವತಿಯನ್ನು ಈ ಇಬ್ಬರು ಯುವಕರು ಮೇಲಕ್ಕೆತ್ತಿದ್ದರಿಂದ ಈ ಸಂದರ್ಭ ಅಲ್ಲಿದ್ದ ನಮನ ಎಂಬ ಹದಿನೈದು ವರ್ಷದ ಬಾಲಕಿ ಸೇರಿದಂತೆ ಇತರರು ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ್ದರು. ಸಕಾಲಕ್ಕೆ ಯುವತಿಯನ್ನು ಮೇಲಕ್ಕೆತ್ತಿದ ಯುವಕರ ಶ್ರಮ ಮತ್ತು ತಕ್ಷಣ ನೀಡಿದ ಪ್ರಥಮ ಚಿಕಿತ್ಸೆಯಿಂದ ಸಾವಿನ ದವಡೆಯಿಂದ ಯುವತಿಯ ಜೀವ ಉಳಿದಿತ್ತು.

ಈ ಹಿನ್ನೆಲೆಯಲ್ಲಿ ಈ ಯುವಕರ ಶ್ರಮ ಜನಮಾನಸದಿಂದ ಮರೆಯುವ ಮುನ್ನವೇ ಯುವತಿಯ ಪ್ರಾಣ ರಕ್ಷಣೆ ಮಾಡಿದ ಬಾರಕೂರು ಪ್ರದೀಪ್ ದೇವಾಡಿಗ ಹಾಗೂ ಪ್ರವೀಣ್ ಪೂಜಾರಿಯವರನ್ನು ವಕ್ವಾಡಿ ಯುವಶಕ್ತಿ ಮಿತ್ರಮಂಡಲಿ ಸದಸ್ಯರು ಹಾಗೂ ಗ್ರಾಮಸ್ಥರು ಬಾರಕೂರಿಗೆ ತೆರಳಿ ಹಾರ್ದಿಕವಾಗಿ ಸನ್ಮಾನಿಸಿದರು,  ಆಪತ್ಕಾಲದಲ್ಲಿ ದೇವರಂತೆ ಬಂದು ಯುವತಿಯ ಪ್ರಾಣ ರಕ್ಷಣೆ ಮಾಡಿದಿರಿ ಎಂದು ಇಬ್ಬರಿಗೂ ಕೃತಜ್ಞತೆ ಸಲ್ಲಿಸಿ ಗೌರವಿಸಿದರು..

Get real time updates directly on you device, subscribe now.