ಅರೆನಗ್ನ ದೇಹದ ಮೇಲೆ ಮಕ್ಕಳಿಂದ ಚಿತ್ರ, ರೆಹೆನಾ ಫಾತಿಮಾ ವಿರುದ್ಧ ಪ್ರಕರಣ

ವಕೀಲ, ಬಿಜೆಪಿ ಕಾರ್ಯಕರ್ತ ಅರುಣ್ ಪ್ರಕಾಶ್ ಎಂಬವರು ತಿರುವಳ್ಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ರೆಹೆನಾ ವಿರುದ್ಧ ಬಾಲನ್ಯಾಯ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಅನ್ವಯ ಪ್ರಕರಣ.

ಈಕೆಯ ಎದೆಯ ಮೇಲೆ ಮಕ್ಕಳು ಚಿತ್ರ ಬರೆಯುವ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.

ಕರಾವಳಿ ಕರ್ನಾಟಕ ವರದಿ
ಕೊಟ್ಟಾಯಂ: ತನ್ನ ಮಕ್ಕಳಿಂದ ತನ್ನ ಅರೆನಗ್ನ ದೇಹದ ಮೇಲೆ ಚಿತ್ರ ಬರೆಸಿಕೊಂಡ ಹೋರಾಟಗಾರ್ತಿ ರೆಹೆನಾ ಫಾತಿಮಾ ಅವರ ವಿರುದ್ಧ ವಕೀಲ, ಬಿಜೆಪಿ ಕಾರ್ಯಕರ್ತ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಕೀಲ, ಬಿಜೆಪಿ ಕಾರ್ಯಕರ್ತ ಅರುಣ್ ಪ್ರಕಾಶ್ ಎಂಬವರು ತಿರುವಳ್ಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ರೆಹೆನಾ ವಿರುದ್ಧ ಬಾಲನ್ಯಾಯ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಈಕೆಯ ಎದೆಯ ಮೇಲೆ ಮಕ್ಕಳು ಚಿತ್ರ ಬರೆಯುವ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಮುಂದಾಗುವ ಮೂಲಕ ರೆಹೆನಾ ಅವರು ದೇಶದಾದ್ಯಂತ ಸುದ್ದಿಯಾಗಿದ್ದರು. ಅಯ್ಯಪ್ಪ ದೇವಸ್ಥಾನಕ್ಕೆ ಹತ್ತು ವರ್ಷದಿಂದ ಐವತ್ತು ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ 2018ರಲ್ಲಿ ತೆರವುಗೊಳಿಸಿದ ಸಂದರ್ಭ ರೆಹೆನಾ ಫಾತಿಮಾ ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಈ ಸಂದರ್ಭ ಆಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಆ ಬಳಿಕ ಆಕೆಯನ್ನು ಉದ್ಯೋಗದಿಂದ ಬಿಎಸ್‌ಎನ್‌ಎಲ್ ಅಮಾನತು ಮಾಡಿತ್ತು.

 

Get real time updates directly on you device, subscribe now.