ಲಾಕ್‌ಡೌನ್ ಸಂತ್ರಸ್ತ ಬಾಡಿಗೆದಾರರ ಬಾಡಿಗೆ ಮನ್ನಾ ಮಾಡಿದ ನಟಿ ಅಮೃತಾ

ಮುಂಬಯಿಯಲ್ಲಿ ಹಲವು ಕಡೆ ಅಪಾರ್ಟ್ಮೆಂಟ್ ಹೊಂದಿರುವ ಅಮೃತಾ ರಾವ್ ಅವರು ಕೆಲವು ತಿಂಗಳು ಬಾಡಿಗೆ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ.

ಬಾಡಿಗೆ ಮನ್ನಾ ಮಾಡುವ ಮೂಲಕ ನನ್ನಿಂದಾದ ಸಹಾಯ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಮುಂಬೈ: ಕೋವಿಡ್ ಲಾಕ್‌ಡೌನ್‌ನಿಂದ ಜನರ ಆರ್ಥಿಕತೆ ಕುಸಿಯುವುದನ್ನು ಮನಗಂಡಿರುವ ನಟಿ ಅಮೃತಾ ರಾವ್ ಅವರು ತನ್ನ ವಸತಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಬಾಡಿಗೆದಾರರ ಬಾಡಿಗೆ ಮನ್ನಾ ಮಾಡಲು ನಿರ್ಧರಿಸಿದ್ದಾರೆ.

ಮುಂಬಯಿಯಲ್ಲಿ ಹಲವು ಕಡೆ ಅಪಾರ್ಟ್ಮೆಂಟ್ ಹೊಂದಿರುವ ಅಮೃತಾ ರಾವ್ ಅವರು ಕೆಲವು ತಿಂಗಳು ಬಾಡಿಗೆ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ.

ಕೋವಿಡ್ ಸೋಂಕಿನಿಂದ ಜನರ ಬದುಕೇ ಅತಂತ್ರವಾಗಿದೆ. ನಮ್ಮ ಅಪಾರ್ಟ್ಮೆಂಟ್‌ನಲ್ಲಿ ನೆಲೆಸಿರುವ ಅನೇಕ ಮಂದಿ ಸಿನೆಮಾದ ಪ್ರತಿದಿನದ ಸಂಪಾದನೆಯನ್ನೇ ನಂಬಿರುವ ಮಂದಿ. ಇವರ ಜೀವನ ಅತಂತ್ರ ಸ್ಥಿತಿಯಲ್ಲಿದೆ. ದುಡಿಮೆ ಇಲ್ಲದೇ ಕಂಗೆಟ್ಟ ಜನ ತಮ್ಮ ಕುಟುಂಬದೊಂದಿಗೆ ಊರಿನತ್ತ ತೆರಳುವ ಕಠಿಣ ನಿರ್ಧಾರಕ್ಕೆ ಬಂದ ಸಮಯ ಇದು. ಇವರ ಪರಿಸ್ಥಿತಿ ಅರ್ಥವಾಗಿದೆ. ಇವರ ಬಾಡಿಗೆ ಮನ್ನಾ ಮಾಡುವ ಮೂಲಕ ನನ್ನಿಂದಾದ ಸಹಾಯ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

Get real time updates directly on you device, subscribe now.