ಬೆಳ್ತಂಗಡಿ: ಮನೆಮಂದಿಯನ್ನು ಕಟ್ಟಿಹಾಕಿ 13ಲಕ್ಷ ರೂ. ನಗನಗದು ದರೋಡೆ

ಕರಾವಳಿ ಕರ್ನಾಟಕ ವರದಿ
ಬೆಳ್ತಂಗಡಿ: ಕಲ್ಮಂಜ ಗ್ರಾಮದ ನೀರಚಿಲುಮೆ ಮಿಯೋ ನಿವಾಸಿ ಅಚ್ಯುತ ಭಟ್ ಎಂಬವರ ಮನೆಗೆ ಶುಕ್ರವಾರ ತಡರಾತ್ರಿ ನುಗ್ಗಿದ ದರೋಡೆಕೋರರು ಹದಿಮೂರು ಲಕ್ಷ ರೂ. ಮೌಲ್ಯದ ನಗನಗದು ದರೋಡೆಗೈದ ಘಟನೆ ನಡೆದಿದೆ.

ರಾತ್ರಿ 2:30 ಸುಮಾರಿಗೆ ಮನೆಗೆ ನುಗ್ಗಿ ಮನೆಮಂದಿಯನ್ನು ಕಟ್ಟಿಹಾಕಿ ದರೋಡೆಗೈದಿದ್ದರು.

ರಾತ್ರಿ ನಾಯಿ ಬೊಗಳಿದ ಸದ್ದು ಕೇಳಿ ಮನೆಯವರು ಬಾಗಿಲು ತೆಗೆದಾಗ ನಾಲ್ವರು ಮುಸುಕುಧಾರಿಗಳು ಮನೆಗೆ ನುಗ್ಗಿ ಅಚ್ಯುತ್ ಭಟ್ ಮತ್ತು ಮನೆಯವರನ್ನು ಬೆದರಿಸಿ ಕಟ್ಟಿಹಾಕಿ ದರೋಡೆಗೈದಿದ್ದಾರೆ. ನಲವತ್ತು ಪವನ್ ಚಿನ್ನ, ಒಂದು ಕೆಜಿ ಬೆಳ್ಳಿ, ಇಪ್ಪತ್ತೈದು ಸಾವಿರ ರೂ ದೋಚಿದ್ದಾರೆ.

ಅಚ್ಯುತ್ ಭಟ್ ಅವರು ಉಜಿರೆಯಲ್ಲಿ ಅಡಿಕೆ ವ್ಯಾಪಾರಿಯಾಗಿದ್ದಾರೆ. ಅಚ್ಯುತ್ ಭಟ್ ಅವರಿಗೆ ಈ ಘಟನೆಯಲ್ಲಿ ಗಾಯವಾಗಿದೆ.

ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ. ಜಿ, ಧರ್ಮಸ್ಥಳ ಪಿಎಸ್‌ಐ ಪವನ್ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Get real time updates directly on you device, subscribe now.