ಕೊರೊನಾ ಪಾಸಿಟಿವ್: ಹೆದರಿದ ಉದ್ಯಮಿ ಆತ್ಮಹತ್ಯೆ

ಕೊರೋನಾ ಬಗ್ಗೆ ಕೆಲ ಬೇಜವಾಬ್ದಾರಿ ಮಾಧ್ಯಮಗಳು ಹಬ್ಬಿಸಿರುವ ಭೀತಿ ಯಾವ ರೀತಿ ಜನರನ್ನು ಹೆದರಿಸಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಹರಿ ಸಿಂಗ್ ಅವರ ಅಳಿಯ ಕೂಡ ಕೋವಿಡ್ ಸೋಂಕಿತರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕರಾವಳಿ ಕರ್ನಾಟಕ ವರದಿ
ತಿರುನೆಲ್ವೇಲಿ: ಕೋವಿಡ್ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಹೆದರಿದ ‘ಇರುತ್ತು ಕಡೈ’ ಹಲ್ವಾ ಮಾಲಕ ಹರಿ ಸಿಂಗ್ (80)ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ನಡೆದಿದೆ.

ಹರಿ ಸಿಂಗ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಗಂಟಲುದ್ರವ ಪರೀಕ್ಷೆ ಸಂದರ್ಭ ಕೊರೋನಾ ಸೋಂಕಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ಆತಂಕಗೊಂಡ ಹರಿ ಸಿಂಗ್ ಟವೆಲ್ ಬಳಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಿರುನೆಲ್ವೇಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನೆಲ್ಲಯಪ್ಪರ್ ದೇವಸ್ಥಾನದ ಬಳಿ ಆರಂಭವಾದ ‘ಇರುತ್ತು ಕಡೈ ಹಲ್ವಾ’ ಸಿಹಿತಿಂಡಿ ಅಂಗಡಿ ತಿರುನೆಲ್ವೇಲಿಯ ಸುಪ್ರಸಿದ್ಧ ಹಲ್ವಾ ಅಂಗಡಿಯಾಗಿದೆ. ಶತಮಾನಗಳ ಇತಿಹಾಸವಿರುವ ಒಂದು ಬೃಹತ್ ಉದ್ಯಮದ ಮಾಲಕರೇ ಆತ್ಮಹತ್ಯೆಗೈಯುತ್ತಾರೆ ಎಂದರೆ ಕೊರೋನಾ ಬಗ್ಗೆ ಕೆಲ ಬೇಜವಾಬ್ದಾರಿ ಮಾಧ್ಯಮಗಳು ಹಬ್ಬಿಸಿರುವ ಭೀತಿ ಯಾವ ರೀತಿ ಜನರನ್ನು ಹೆದರಿಸಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಹರಿ ಸಿಂಗ್ ಅವರ ಅಳಿಯ ಕೂಡ ಕೋವಿಡ್ ಸೋಂಕಿತರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

 

Get real time updates directly on you device, subscribe now.