ಕಾರು ಪಲ್ಟಿ: ಧರ್ಮಸ್ಥಳಕ್ಕೆ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು, ಇಬ್ಬರು ಗಂಭೀರ

ಅಪಘಾತದ ತೀವೃತೆಗೆ ಕಾರು ನಜ್ಜುಗುಜ್ಜಾಗಿದೆ. ರಸ್ತೆಗೆ ಉಜ್ಜಿದ್ದರಿಂದ ಕಿಡಿಗಳು ಉಂಟಾಗಿದ್ದರೂ ಬೆಂಕಿ ಹೊತ್ತಿಕೊಂಡಿಲ್ಲ. 

ಕರಾವಳಿ ಕರ್ನಾಟಕ ವರದಿ
ಚಿಕ್ಕಮಗಳೂರು: ಕರ್ತಿಕೆರೆ ಗ್ರಾಮದ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಸಂದರ್ಭ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಮಂಜುನಾಥ(30) ಮತ್ತು ಮುತ್ತು ರಾಜ(28) ಎಂದು ಮೃತರನ್ನು ಗುರುತಿಸಲಾಗಿದೆ. ಗಾಯಾಳುಗಳನ್ನು ಚಿಕ್ಕಮಗಳೂರಿನ ಮಲ್ಲೇಗೌಡ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ಮೂಲದ ನಾಲ್ವರು ಧರ್ಮಸ್ಥಳಕ್ಕೆ ಬರುತ್ತಿದ್ದಾಗ ತಡ ರಾತ್ರಿ 1:30ಸುಮಾರಿಗೆ ಕಾರು ಕಂಬಕ್ಕೆ ಗುದ್ದಿ ಉರುಳಿ ಬಿದ್ದಿತ್ತು. ಅಪಘಾತದ ತೀವೃತೆಗೆ ಕಾರು ನಜ್ಜುಗುಜ್ಜಾಗಿದೆ. ರಸ್ತೆಗೆ ಉಜ್ಜಿದ್ದರಿಂದ ಕಿಡಿಗಳು ಉಂಟಾಗಿದ್ದರೂ ಬೆಂಕಿ ಹೊತ್ತಿಕೊಂಡಿಲ್ಲ.

ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

Get real time updates directly on you device, subscribe now.