ವಿರೋಧ ಶಮನ: ಬೋಳಾರದಲ್ಲೇ ಕೊರೋನದಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರ

ಇಲ್ಲಿ ಹೊರಗಿನ ಯುವಕನ ಅಂತ್ಯಸಂಸ್ಕಾರಕ್ಕೆ ಆಸ್ಪದ ನೀಡುವುದಿಲ್ಲ ಎಂದು ಮಸೀದಿಗೆ ಸಂಬಂಧಪಡದ ಕೆಲವರು ತೀವೃ ವಿರೋಧ ವ್ಯಕ್ತಪಡಿಸಿದ್ದರು.

ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅವರು ವಿರೋಧ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕೊರೋನಾ ಸೋಂಕಿನಿಂದ ಮೃತಪಟ್ಟ ಸುರತ್ಕಲ್ ಬಳಿಯ ಇಡ್ಯದ ಯುವಕನ ಅಂತ್ಯಸಂಸ್ಕಾರವನ್ನು ಬೋಳಾರ ಮಸೀದಿಯ ದಫನ ಭೂಮಿಯಲ್ಲೇ ಸಂಜೆ ನಡೆಸಲಾಯಿತು. ಇಲ್ಲಿ ಹೊರಗಿನ ಯುವಕನ ಅಂತ್ಯಸಂಸ್ಕಾರಕ್ಕೆ ಆಸ್ಪದ ನೀಡುವುದಿಲ್ಲ ಎಂದು ಮಸೀದಿಗೆ ಸಂಬಂಧಪಡದ ಕೆಲವರು ತೀವೃ ವಿರೋಧ ವ್ಯಕ್ತಪಡಿಸಿದ್ದರು. ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅವರು ವಿರೋಧ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬೋಳಾರ ಮಸೀದಿ ಆವರಣದಲ್ಲಿರುವ ದಫನ ಭೂಮಿಯಲ್ಲಿ ಶವ ದಫನಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ ಕೆಲವರ ವಿರೋಧದಿಂದ ಮೃತದೇಹವನ್ನು ಮರಳಿ ಇಡ್ಯಾಕ್ಕೆ ಕಳಿಸಲಾಗಿತ್ತು. ಈ ಮಾಹಿತಿ ಪಡೆದು ಕಾರ್ಯಪ್ರವೃತ್ತರಾದ ಸಹಾಯಕ ಆಯುಕ್ತ ಮದನ್ ಮೋಹನ್ ಅವರು ಮೃತದೇಹವನ್ನು ಬೋಳಾರಕ್ಕೆ ಮರಳಿ ತರುವಂತೆ ಸೂಚಿಸಿದ್ದರು. ಬೋಳಾರಕ್ಕೆ ಬಂದು ವಿರೋಧ ವ್ಯಕ್ತಪಡಿಸುವರ ಮನ ಪರಿವರ್ತನೆ ಮಾಡಿದ್ದಾರೆ. ವಿರೋಧಿಗಳು ಬೋಳಾರದವರು ಕೊರೋನಾದಿಂದ ಮೃತಪಟ್ಟರೆ ಅವರ ಅಂತ್ಯಸಂಸ್ಕಾರ ನಡೆಸಬಹುದು. ಆದರೆ ಕೊರೋನಾದಿಂದ ಮೃತಪಟ್ಟ ಹೊರಗಿನ ವ್ಯಕ್ತಿಗಳ ಅಂತ್ಯಸಂಸ್ಕಾರ ಇಲ್ಲಿ ಮಾಡಕೂಡದು ಎಂದು ಪಟ್ಟುಹಿಡಿದಿದ್ದು, ಬಳಿಕ ಪಟ್ಟು ಸಡಿಲಿಸಿ ಅಂತ್ಯಸಂಸ್ಕಾರಕ್ಕೆ ಸಮ್ಮತಿಸಿದ್ದು, ದಫನ ಕಾರ್ಯ ಮಾಡಲಾಯಿತು.

ದಫನ ಗುಂಡಿ ಹನ್ನೆರಡು ಅಡಿ ಆಳ ಇರಬೇಕು ಮತ್ತು ಇನ್ನು ಮುಂದೆ ಹೊರಗಿನ ಕೋರೋನಾ ಸೋಂಕಿತರ ಮೃತದೇಹಗಳನ್ನು ಇಲ್ಲಿ ದಫನ ಮಾಡಕೂಡದು ಎಂದು ವಿರೋಧಿಗಳು ಷರತ್ತು ವಿಧಿಸಿದ್ದರೂ ಸಹಾಯಕ ಆಯುಕ್ತರು ಮುಂದಿನ ವಿಚಾರಗಳನ್ನು ಮುಂದೆ ನೋಡೋಣ. ಈಗ ಇಲ್ಲಿ ಅವಕಾಶ ಕೊಡಿ ಎಂದು ಮನಒಲಿಸಿದ್ದರು.

ಯುವಕನ ಊರಾದ ಸುರತ್ಕಲ್ ಬಳಿಯ ಇಡ್ಯದ ಮಸೀದಿಯ ದಫನ್ ಭೂಮಿಯಲ್ಲಿ ಕಬರ್ ಗುಂಡಿಯಲ್ಲಿ ಮಳೆ ನೀರು ಸಮಸ್ಯೆಯಿಂದ ಬೋಳಾರದಲ್ಲಿ ಅವಕಾಶ ನೀಡುವಂತೆ ಸಮುದಾಯದ ಮತ್ತು ಮಸೀದಿಯ ಮುಖಂಡರು ಬೋಳಾರ ಮಸೀದಿಯವರಿಗೆ ಮನವಿ ಮಾಡಿಕೊಂಡ ಮೇರೆಗೆ ಅನುವು ಮಾಡಿಕೊಡಲಾಗಿತ್ತು. ಕಮಿಟಿ ಸದಸ್ಯರು, ಜಮಾತ್ ಮತ್ತು ಜಮಾತ್‌ಗೆ ಒಳಪಡುವ ಮನೆಯವರು ಕೂಡ ಸಮ್ಮತಿಸಿದ್ದರು. ಆ ಬಳಿಕ ಮಸೀದಿಗೆ ಸಂಬಂಧವಿಲ್ಲದವರ ತೀವೃ ಆಕ್ಷೇಪದ ಹಿನ್ನೆಲೆಯಲ್ಲಿ ಸಮಾಜದ ಸೌಹಾರ್ದ ಈ ಘಟನೆಯಿಂದ ಕದಡುವುದು ಬೇಡ. ಯುವಕನ ದಫನ ಕಾರ್ಯವನ್ನು ಇಡ್ಯಾದಲ್ಲೇ ಮಾಡುವುದಾಗಿ ಇಡ್ಯಾ ಮಸೀದಿ ಮುಖಂಡರು ಬೋಳಾರ ಮಸೀದಿ ಮುಖಂಡರಿಗೆ ತಿಳಿಸಿದ್ದರು. ಹೀಗೆ ವಾಪಾಸ್ ಕೊಂಡು ಹೋದ ಮೃತದೇಹವನ್ನು ಬೋಳಾರದಲ್ಲೇ ದಫನ ಮಾಡುವ ಬಗ್ಗೆ ಸಹಾಯಕ ಆಯುಕ್ತರ ಪರಿಶ್ರಮ ಜನಮನ ಸೆಳೆದಿದೆ.

ಕೊರೋನಾ ಸೋಂಕಿತ ಜೋಕಟ್ಟೆ ಮಹಿಳೆ ನಿಧನ

ಸುರತ್ಕಲ್ ಗ್ರಾಮದ ಜೋಕಟ್ಟೆಯ ಮಹಿಳೆ(51ವರ್ಷ) ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರಿಗೆ ಜೂ.26ರಂದು ಸೋಂಕು ದೃಢಪಟ್ಟಿತ್ತು. ಭಾನುವಾರ ಬೆಳಿಗ್ಗೆ ಸುರತ್ಕಲ್ ಇಡ್ಯಾದ ಯುವಕ ಮತ್ತು ಬಂಟ್ವಾಳದ ಮಹಿಳೆ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದರು.

Get real time updates directly on you device, subscribe now.