ತಮಿಳುನಾಡು ಪೊಲೀಸ್ ದೌರ್ಜನ್ಯ: ಆಟೋ ಚಾಲಕ ಸಾವು

ಆಟೊ ಚಾಲಕ ಎನ್‌.ಕುಮಾರೇಸನ್‌ ಅವರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಕಸ್ಟಡಿಯಲ್ಲೇ ಇರಿಸಿಕೊಂಡು ಹಲ್ಲೆಗೈದಿದ್ದರು

ಪೊಲೀಸ್‌ ಕಸ್ಟಡಿಯಲ್ಲಿ ತಂದೆ ಹಾಗೂ ಮಗ ಮೃತಪಟ್ಟ ಘಟನೆ ಬೆನ್ನಲ್ಲೇ ತಮಿಳುನಾಡು ಪೊಲೀಸರ ಕ್ರೌರ್ಯಕ್ಕೆ ಆಟೋ ಚಾಲಕ ಬಲಿ.

ಕರಾವಳಿ ಕರ್ನಾಟಕ ವರದಿ
ಚೆನ್ನೈ: ಪೊಲೀಸ್‌ ಕಸ್ಟಡಿಯಲ್ಲಿ ತಂದೆ ಹಾಗೂ ಮಗ ಮೃತಪಟ್ಟ ಘಟನೆ ಬೆನ್ನಲ್ಲೇ ತಮಿಳುನಾಡು ಪೊಲೀಸರ ಕ್ರೌರ್ಯಕ್ಕೆ ಆಟೋ ಚಾಲಕರೋರ್ವರು  ಬಲಿಯಾಗಿದ್ದಾರೆ.

ತೆಂಕಾಸಿ ಜಿಲ್ಲೆಯ ವೀರ­ಕೇರಳಂಪುದೂರ್‌ನಲ್ಲಿ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಮೃತ ಆಟೋ ಚಾಲಕನನ್ನು ಎನ್. ಕುಮಾರೇಶನ್ ಎಂದು ಗುರುತಿಸಲಾಗಿದೆ. ಪೊಲೀಸ್ ದೌರ್ಜನ್ಯದಿಂದ ಹದಿನೈದು ದಿನ ಆಸ್ಪತ್ರೆಯಲ್ಲಿದ್ದ ಕುಮಾರೇಶನ್ ಸಾವಪ್ಪಿರುವುದು ಮತ್ತೆ ವಿವಾದಕ್ಕೆ ಕಾರಣವಾಗಿದೆ.

ಭೂ ವಿವಾದ ಪ್ರಕರಣದಲ್ಲಿ ವಿಚಾರಣೆಗೆ ಆಟೊ ಚಾಲಕ ಎನ್‌.ಕುಮಾರೇಸನ್‌ ಅವರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಕಸ್ಟಡಿಯಲ್ಲೇ ಇರಿಸಿಕೊಂಡು ಹಲ್ಲೆಗೈದಿದ್ದರು ಎನ್ನಲಾಗಿದೆ. ಕುಮಾರೇಶನ್ ಮನೆಗೆ ಬಂದ ಬಳಿಕ ರಕ್ತ ವಾಂತಿ ಮಾಡಿದ್ದರು. ಅವರನ್ನು ಸುರಂದೈ ಆಸ್ಪತ್ರೆಗೆ ದಾಖಲಿಸಿ ಬಳಿಕ ತಿರುವನ್ವೇಲಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯರು ಕಿಡ್ನಿ ಹಾಗೂ ಕಿಬ್ಬೊಟ್ಟೆಯ ಮೇಲ್ಭಾಗಕ್ಕೆ ತೀವ್ರ ಹಾನಿಯಾಗಿದೆ ಎಂದು ತಿಳಿಸಿದ್ದು, ಈ ಬಗ್ಗೆ  ಚಿಕಿತ್ಸೆ ನೀಡುತ್ತಿದ್ದರು. ಆಸ್ಪತ್ರೆಯಲ್ಲಿದ್ದ ಸಂದರ್ಭ ಕುಮಾರೇಶನ್ ಅವರು ತನಗೆ ಪೊಲೀಸರು ದೌರ್ಜನ್ಯ ಎಸಗಿದ್ದನ್ನು ಹೇಳಿದ್ದರು. ಈ ಬಗ್ಗೆ ಹೇಳಬಾರದು ಎಂದು ಪೊಲೀಸರು ಬೆದರಿಕೆ ಒಡ್ಡಿದ್ದರು ಎಂಬ ಸಂಗತಿ ಈ ಸಂದರ್ಭ ಬೆಳಕಿಗೆ ಬಂದಿತ್ತು.

ಇನ್ಸ್‌ಪೆಕ್ಟರ್ ಚಂದ್ರಶೇಖರ ಮತ್ತು ಪೇದೆ ಕುಮಾರ ಎಂಬವರ ವಿರುದ್ಧ ಈ ಪ್ರಕರಣಕ್ಕೆ ಸಂಬಂಧಿಸಿ ಐಪಿಸಿ174(3) ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಕಸ್ಟಡಿಯಲ್ಲಿ ತಂದೆ-ಮಗ ಸಾವು ಪ್ರಕರಣ ಸಿಬಿಐಗೆ: ಸಿಎಂ ಪಳನಿಸ್ವಾಮಿ

ತೂತುಕುಡಿ ಪೊಲೀಸ್ ದೌರ್ಜನ್ಯದಿಂದ ತಂದೆ-ಮಗ ಸಾವಪ್ಪಿದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್  ಅನುಮತಿಯೊಂದಿಗೆ ಸಿಬಿಐಗೆ ಹಸ್ತಾಂತರಿಸುವುದಾಗಿ ಸಿಎಂ ಪಳನಿಸ್ವಾಮಿ ಹೇಳಿದ್ದಾರೆ.

Get real time updates directly on you device, subscribe now.