ಕಾರು ಡಿಕ್ಕಿ: ಮೂರು ವರ್ಷದ ಮಗು ಮೃತ್ಯು

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕೊಣಾಜೆ ಸಮೀಪ ನಡುಪದವು ಬಳಿ ಮನೆಯೊಂದರಿಂದ ರಸ್ತೆಗೆ ಧಾವಿಸಿ ಬಂದ ಮಗು ಕಾರಿನಡಿ ಸಿಲುಕಿ ಮೃತಪಟ್ಟ ಖೇದಕರ ಘಟನೆ ವರದಿಯಾಗಿದೆ.

ನಡುಪದವು ನಿವಾಸಿ ಫಾರೂಕ್ ಎಂಬವರ ಮಗು ಫಾಹಿಮಾ ಮೃತಪಟ್ಟ ಮಗು.

ಇಂದು ಮಧ್ಯಾಹ್ನ ಒಳ ರಸ್ತೆಯಿಂದ ಮುಖ್ಯ ರಸ್ತೆಗೆ ವ್ಯಕ್ತಿಯೋರ್ವರು ಕಾರಿನಲ್ಲಿ ಬರುತ್ತಿದ್ದಾಗ ಈ ಆಕಸ್ಮಿಕ ಘಟನೆ ನಡೆದಿದೆ.

Get real time updates directly on you device, subscribe now.