ಕುಂದಾಪುರ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಗೆ ಕೋವಿಡ್ ದೃಢ

ವಿದ್ಯಾರ್ಥಿನಿಯ ಮನೆಗೆ ಮುಂಬೈಯಿಂದ ಬಂದ ಸಂಬಂಧಿಕರಿಂದ ಕೋವಿಡ್ ಸೋಂಕು ಬಂದಿದೆಯೇ ಎಂಬುದು ಖಚಿತವಾಗಿಲ್ಲ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿನಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ವಿದ್ಯಾರ್ಥಿನಿಯ ಮನೆಗೆ ಮುಂಬೈಯಿಂದ ಬಂದ ಸಂಬಂಧಿಕರಿಂದ ಕೋವಿಡ್ ಸೋಂಕು ಬಂದಿದೆಯೇ ಎಂಬುದು ಖಚಿತವಾಗಿಲ್ಲ.

ಈಕೆ ಮೂರು ಪರೀಕ್ಷೆಗಳನ್ನು ಬರೆದಿದ್ದರು. ಇನ್ನುಳಿದ ಪರೀಕ್ಷೆಗಳನ್ನು ಸದ್ಯ ಬರೆಯುವುದರಿಂದ ವಂಚಿತರಾಗಿದ್ದಾರೆ.

ಎರಡು ತಿಂಗಳ ಹಿಂದೆ ಮುಂಬೈಯಿಂದ ಕೋವಿಡ್ ಸೋಂಕು ದೃಢಪಟ್ಟು, ಚಿಕಿತ್ಸೆಯಿಂದ ಗುಣಮುಖರಾದ ಇಬ್ಬರು ವಿದ್ಯಾರ್ಥಿನಿಯ ಮನೆಗೆ ಬಂದಿದ್ದರು ಎನ್ನಲಾಗಿದೆ. ವಿದ್ಯಾರ್ಥಿನಿಗೆ ಕೋವಿಡ್ ಸೋಂಕು ಬಂದಿದ್ದು ಹೇಗೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಕಾಪು ತಾಲೂಕಿನ ವಿದ್ಯಾರ್ಥಿನಿಯೋರ್ವರಲ್ಲೂ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

Get real time updates directly on you device, subscribe now.