ಆಡಳಿತ ವಿರೋಧಿ ದಂಗೆಗೆ ಪ್ರಚೋದನೆ ಆರೋಪ: ಇರಾನಿ ಪತ್ರಕರ್ತನಿಗೆ ಮರಣದಂಡನೆ ಸಜೆ

2017ರಲ್ಲಿ ಇರಾನ್‌ನಲ್ಲಿ ನಡೆದ ವ್ಯಾಪಕ ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪತ್ರಕರ್ತನಿಗೆ ಮರಣದಂಡನೆ ವಿಧಿಸಲಾಗಿದೆ.

ಕರಾವಳಿ ಕರ್ನಾಟಕ ವರದಿ
ಟೆಹ್ರಾನ್: ಆಡಳಿತ ವಿರೋಧಿ ರ್ಯಾಲಿಗಳಿಗೆ ಸ್ಫೂರ್ತಿಯಾಗಿದ್ದರು ಎಂದು ಸರಕಾರದ ಕೋಪಕ್ಕೆ ಕಾರಣವಾಗಿದ್ದ ಪತ್ರಕರ್ತ ರುಹೊಲ್ಲಾ ಝಾಂ ಅವರಿಗೆ ಮರಣ ದಂಡನೆ ವಿಧಿಸಲಾಗಿದೆ.

2017ರಲ್ಲಿ ಇರಾನ್‌ನಲ್ಲಿ ನಡೆದ ವ್ಯಾಪಕ ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪತ್ರಕರ್ತನಿಗೆ ಮರಣದಂಡನೆ ವಿಧಿಸಲಾಗಿದೆ.

ರುಹೊಲ್ಲಾ ಝಾಂ ಅವರನ್ನು ಇತ್ತೀಚೆಗೆ ಫ್ರಾನ್ಸ್‍ನಿಂದ ಉಪಾಯದಿಂದ ಕರೆಸಿಕೊಂಡು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ರುಹೊಲ್ಲಾ ಅವರು ನಡೆಸುತ್ತಿದ್ದ ‘ಅಮದ್ ನ್ಯೂಸ್’ ಇರಾನ್ ಸರಕಾರವನ್ನು ಮುಜುಗರಕ್ಕೀಡುಮಾಡುವಂಥ ವಿಡಿಯೋ, ಸುದ್ದಿಗಳನ್ನು ಪ್ರಕಟಿಸುತ್ತಿತ್ತು ಎಂದು ಆರೋಪಿಸಲಾಗಿತ್ತು.

ಇರಾನ್ ನ್ಯಾಯಾಂಗ ವಕ್ತಾರ ಘೋಲಂ‌ಹೋಸಿನ್ ಎಸ್ಮಾಯಿಲ್ ಮರಣದಂಡನೆ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.

ಈ ಮರಣ ದಂಡನೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಅವಕಾಶ ಪತ್ರಕರ್ತ ಹೊಂದಿದ್ದಾರೆ.

Get real time updates directly on you device, subscribe now.