ಕೋವಿಡ್ ಸೋಂಕು: ಭಟ್ಕಳದ ಯುವಕ ಮೃತ್ಯು

ಕರಾವಳಿ ಕರ್ನಾಟಕ ವರದಿ
ಭಟ್ಕಳ: ಕೊರೋನಾ ಸೋಂಕಿತರಾದ ಭಟ್ಕಳದ 31 ವರ್ಷದ ಯುವಕ ಮತ್ತು ಮಂಗಳೂರಿನ 78 ವರ್ಷದ ಪುರುಷ ಮೃತಪಟ್ಟಿದ್ದಾರೆ.

ಭಟ್ಕಳದ ಯುವಕ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮರಣದ ನಂತರ ಗಂಟಲುದ್ರವ ಪರೀಕ್ಷೆ ಮಾಡಿದಾಗ ಪಾಸಿಟಿವ್ ವರದಿ ಬಂದಿದೆ. ಯುವಕ ಮದುವೆಯಾಗಿ ಐದು ದಿನಗಳಾಗಿತ್ತು ಎಂದು ತಿಳಿದುಬಂದಿದೆ.

ಮಂಗಳೂರಿನ ಬೆಂಗ್ರೆ ನಿವಾಸಿ  ಪುರುಷ ಮಧುಮೇಹ ಮತ್ತು ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದು, ಕೋವಿಡ್ ಸೋಂಕು ದೃಢವಾಗಿದ್ದು, ಇಂದು ಮುಂಜಾನೆ ಮೃತಪಟ್ಟಿದ್ದಾರೆ.

 

 

Get real time updates directly on you device, subscribe now.