ಬೈಂದೂರು: ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಗೆ ಕೊರೋನಾ ಸೋಂಕು

ಮುಂಬೈಯಿಂದ ಬಂದವರಿಂದ ಕೊರೋನ ಸೋಂಕು ಈಕೆಗೆ ಬಂದಿರಬಹುದು ಶಂಕಿಸಲಾಗಿದೆ.

ಕರಾವಳಿ ಕರ್ನಾಟಕ ವರದಿ
ಬೈಂದೂರು: ಎಸೆಸೆಲ್ಸಿ ವಿದ್ಯಾರ್ಥಿನಿಯೋರ್ವರಿಗೆ ಕೊರೋನಾ ಸೋಂಕು ದೃಢ ಪಟ್ಟಿದೆ. ಈಕೆ ಮೂರು ಪರೀಕ್ಷೆಗಳನ್ನು ಬರೆದಿದ್ದು, ಮುಂದಿನ ಪರೀಕ್ಷೆ ಬರೆಯುವ ಅವಕಾಶದಿಂದ ಸದ್ಯ ವಂಚಿತರಾಗಿದ್ದಾರೆ.

ಜೂ.30ರಂದು ಇವರ ಗಂಟಲ ದ್ರವ ಪರೀಕ್ಷಿಸಲಾಗಿತ್ತು.

ಮುಂಬೈಯಿಂದ ಬಂದವರಿಂದ ಕೊರೋನ ಸೋಂಕು ಈಕೆಗೆ ಬಂದಿರಬಹುದು ಶಂಕಿಸಲಾಗಿದೆ. ಈಕೆಗೆ ತೀವೃ ಬೆನ್ನುನೋವು ಉಂಟಾಗಿತ್ತು ಎನ್ನಲಾಗಿದೆ.

ಶೀತ, ಜ್ವರ, ಬೆನ್ನು ನೋವು, ಗುಳ್ಳೆಗಳು, ಮೊಣಕಾಲು, ಹಿಮ್ಮಡಿ ನೋವು, ತೀವೃ ಮಧುಮೇಹದ ಲಕ್ಷಣಗಳು ಕೋವಿಡ್ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತವೆ.

ಕಟ್ಟಿದ ಮೂಗು, ವಾಂತಿ, ಬೇಧಿ ಕೂಡ ಕೋವಿಡ್ ಲಕ್ಷಣಗಳಲ್ಲಿ ಸೇರಿವೆ.

ಈ ಪ್ರಕರಣ ಸೇರಿದಂತೆ ಜಿಲ್ಲೆಯ ಮೂವರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರಲ್ಲಿ ಕೊರೋನಾ ಸೋಂಕು ಕಂಡುಬಂದಿದೆ.

Get real time updates directly on you device, subscribe now.