ಮಂಗಳೂರು: ಶಾಸಕ ಭರತ್ ಶೆಟ್ಟಿಗೆ ಕೊರೋನ ಸೋಂಕು

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿಯವರಲ್ಲಿ ಕೊರೋನ ಸೋಂಕು ದೃಢ ಪಟ್ಟಿದೆ. ಈ ಬಗ್ಗೆ ಭರತ್ ಶೆಟ್ಟಿಯವರು ಟ್ವೀಟ್ ಮಾಡಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ನಿಮ್ಮ ಹಾರೈಕೆಗಳಿಂದ ಚೇತರಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಬೇಕು. ಹೊರಗೆ ಹೋಗುವಾಗ ಮಾಸ್ಕ್ ಧರಿಸಿ ಮತ್ತು ಕೈ ತೊಳೆಯಿರಿ ಎಂದು ವಿನಂತಿಸಿದ್ದಾರೆ. ನಿಮ್ಮ ಆರೋಗ್ಯದ ಕಾಳಜಿ ಇರಲಿ ಎಂದಿದ್ದಾರೆ.

Get real time updates directly on you device, subscribe now.