ಬಾರ್ಕೂರು: ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಯುವಕರ ಸಾವು

ಸ್ಥಳೀಯ ಯುವಕರು ಬರುವ ಮುನ್ನವೇ ಇವರಿಬ್ಬರು ಬಲೆ ಎಳೆಯಲು ಹೋಗಿದ್ದು, ಕೆಸರಿನಲ್ಲಿ ಕಾಲು ಹೂತು ನೀರಿನಲ್ಲಿ ಮುಳುಗಿದರು ಎನ್ನಲಾಗಿದೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ರಾತ್ರಿ ಹಾಕಿದ ಬಲೆಯನ್ನು ಮುಂಜಾನೆ ತೆಗೆಯುವ ಸಂದರ್ಭ ಇಬ್ಬರು ಯುವಕರು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಕಳವಳಕಾರಿ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಕಾರ್ತಿಕ್

ಮೃತ ಯುವಕರನ್ನು ಬಾರ್ಕೂರು ಕವಲೇಶ್ವರಿ ನಿವಾಸಿಗಳಾದ ಹರ್ಷ(25) ಮತ್ತು ಕಾರ್ತಿಕ್(18) ಎಂದು ಗುರುತಿಸಲಾಗಿದೆ.

ಹರ್ಷ

ಹರ್ಷ ಫೈನಾನ್ಸ್ ಉದ್ಯೋಗಿಯಾಗಿದ್ದರು. ಕಾರ್ತಿಕ್ ಪದವಿ ವಿದ್ಯಾರ್ಥಿಯಾಗಿದ್ದರು.

ಕಾರ್ತಿಕ್ ಮುಳುಗುವುದನ್ನು ಕಂಡು ಬಚಾವ್ ಮಾಡುವ ಸಂದರ್ಭ ಹರ್ಷ ಕೂಡ ಮುಳುಗಿದ್ದರು ಎನ್ನಲಾಗುತ್ತಿದೆ. ಸ್ಥಳೀಯ ಯುವಕರು ಬರುವ ಮುನ್ನವೇ ಇವರಿಬ್ಬರು ಬಲೆ ಎಳೆಯಲು ಹೋಗಿದ್ದು, ಕೆಸರಿನಲ್ಲಿ ಕಾಲು ಹೂತು ನೀರಿನಲ್ಲಿ ಮುಳುಗಿದರು ಎನ್ನಲಾಗಿದೆ.

ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.