ಬೆಳ್ತಂಗಡಿ: 94ಸಿ ಹಕ್ಕುಪತ್ರ ವಿತರಣೆ ಅಕ್ರಮ, ಕಳಿಯ ಗ್ರಾ.ಪಂ ಮೇಲೆ ಎಸಿಬಿ ದಾಳಿ

ಪರಪ್ಪು ನಿವಾಸಿ ಆದಂ ಶಾಫಿ ಎಂಬವರು ಮಂಗಳೂರು ಎಸಿಬಿಗೆ ದೂರು ನೀಡಿದ್ದರು.

ಓರ್ವ ಪಂಚಾಯತ್ ಸದಸ್ಯ ಸೇರಿದಂತೆ ನಲವತ್ತು ಮಂದಿಗೆ ಪಂಚಾಯತ್ ದೃಢ ಪತ್ರ ನೀಡಿದೆ ಎಂದು ದೂರಲಾಗಿತ್ತು.

ಕರಾವಳಿ ಕರ್ನಾಟಕ ವರದಿ
ಬೆಳ್ತಂಗಡಿ: ತಾಲೂಕಿನ ಗೇರುಕಟ್ಟೆ ಕಳಿಯ ಪಂಚಾಯತ್ ಮೇಲೆ ಶನಿವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿದೆ. ಖಾಲಿ ಜಾಗಕ್ಕೆ 94ಸಿ ಹಕ್ಕುಪತ್ರ ವಿತರಣೆ ನಡೆಸಲಾಗಿದೆ ಎಂಬ ನಾಗರಿಕರೋರ್ವರ ದೂರಿನ ಆಧಾರದಲ್ಲಿ ದಾಳಿ ನಡೆದಿದೆ.

ಪಂಚಾಯತ್ ಪಿಡಿಓ, ಅಧ್ಯಕ್ಷ ಹಾಗೂ ಸದಸ್ಯರೋರ್ವರ ಮೇಲೆ ಪರಪ್ಪು ನಿವಾಸಿ ಆದಂ ಶಾಫಿ ಎಂಬವರು ಮಂಗಳೂರು ಎಸಿಬಿಗೆ ದೂರು ನೀಡಿದ್ದರು.

ಒಂದೇ ಕುಟುಂಬಕ್ಕೆ ಎರಡು-ಮೂರು 94ಸಿ ಹಕ್ಕು ಪತ್ರ ನೀಡಿದ್ದಾರೆ. ಮನೆ ನಿರ್ಮಾಣವಾಗದಿದ್ದರೂ ಹಕ್ಕುಪತ್ರ ನೀಡಲಾಗಿದೆ. ಓರ್ವ ಪಂಚಾಯತ್ ಸದಸ್ಯ ಸೇರಿದಂತೆ ನಲವತ್ತು ಮಂದಿಗೆ ಪಂಚಾಯತ್ ದೃಢ ಪತ್ರ ನೀಡಿದೆ ಎಂದು ದೂರಲಾಗಿತ್ತು.

ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ಬಿ.ಸಿ. ಶ್ಯಾಂ ಸುಂದರ್, ಹರಿಪ್ರಸಾದ್, ಪ್ರಶಾಂತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.