ಉಡುಪಿ ಜಿಲ್ಲೆಯಲ್ಲಿ ರವಿವಾರ ಸಂಪೂರ್ಣ ಲಾಕ್‌ಡೌನ್, ಉಲ್ಲಂಘಿಸಿದರೆ ಕೇಸ್: ಡಿಸಿ ಜಗದೀಶ್

ಜಿಲ್ಲೆಯಾದ್ಯಂತ ಸೆ.144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ರವಿವಾರ ಜಿಲ್ಲೆಯಲ್ಲಿ ಹಾಲು-ಪತ್ರಿಕೆ ಸಿಗುತ್ತವೆ. ಆಸ್ಪತ್ರೆಗಳು-ಔಷಧ ಅಂಗಡಿಗಳು ತೆರೆದಿರುತ್ತವೆ. ಅಗತ್ಯ ಸರಕುಗಳ ಸಾಗಾಣಿಕೆಗೆ ನಿರ್ಬಂಧವಿಲ್ಲ, ಅನ್‌ಲೋಡ್ ಮಾಡಲು ಅವಕಾಶವಿದೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ರಾಜ್ಯ ಸರಕಾರದ ಆದೇಶದಂತೆ ಜು.5ರಿಂದ ಆ.2ರ ತನಕ ಪ್ರತೀ ರವಿವಾರ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ಯಾವುದೇ ವ್ಯಕ್ತಿಗಳು ಅನಗತ್ಯವಾಗಿ ತಿರುಗಾಡಿದರೆ ವಾಹನ ಮುಟ್ಟುಗೋಲು ಹಾಕಿಕೊಂಡು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ರವಿವಾರ ಜಿಲ್ಲೆಯಲ್ಲಿ ಹಾಲು-ಪತ್ರಿಕೆ ಸಿಗುತ್ತವೆ. ಆಸ್ಪತ್ರೆಗಳು-ಔಷಧ ಅಂಗಡಿಗಳು ತೆರೆದಿರುತ್ತವೆ. ಅಗತ್ಯ ಸರಕುಗಳ ಸಾಗಾಣಿಕೆಗೆ ನಿರ್ಬಂಧವಿಲ್ಲ, ಅನ್‌ಲೋಡ್ ಮಾಡಲು ಅವಕಾಶವಿದೆ. ಉಳಿದಂತೆ ಯಾವುದೇ ವಸ್ತುಗಳೂ ಸಿಗುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಪೂರ್ವ ನಿಗದಿಯಾದ ವಿವಾಹಗಳಿಗೆ ಗರಿಷ್ಠ ಐವತ್ತು ಜನರಿಗೆ ನಿರ್ಬಂಧ ವಿಧಿಸಲಾಗಿದೆ. ತಹಶೀಲ್ದಾರ್ ಅನುಮತಿ ಪಡೆದು ವಿವಾಹ ನಡೆಸಬಹುದು ಎಂದಿದ್ದಾರೆ.

ಜಿಲ್ಲೆಯಾದ್ಯಂತ ಸೆ.144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

Get real time updates directly on you device, subscribe now.