ಕುಂದಾಪುರ: ಪೊಲೀಸರ ಎದುರೇ ವಿಷ ಕುಡಿಯಲು ಯತ್ನಿಸಿದ ಯುವಕ

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಗ್ರಾಮಾಂತರ ಠಾಣೆಯ ಎದುರು ವಿಷದ ಬಾಟಲಿ ಹಿಡಿದು ವಿಷ ಕುಡಿದು ಸಾಯುವುದಾಗಿ ಹೇಳಿದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಉಡುಪಿ ಚಿತ್ಪಾಡಿಯ ಕಿಶನ್‌ ಶೆಟ್ಟಿ ಕೈಯಲಿದ್ದ ಬಾಟಲಿಯಲ್ಲಿದ್ದ ವಿಷವನ್ನು ಕುಡಿಯಲು ಪ್ರಯತ್ನಿಸಿದಾಗ ಸಮಾಧಾನ ಪಡಿಸಿದ ಪೊಲೀಸರು ತಡೆದಿದ್ದಾರೆ.

ಆತನನ್ನು ವಿಚಾರಿಸಿದಾಗ ಆತ ಪ್ರಕರಣವೊಂದರ ಆರೋಪಿ ಎಂಬುದು ತಿಳಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.