ಹರೇಕಳದ ಯುವಕನ ಶವ ಪತ್ತೆ, ಆತ್ಮಹತ್ಯೆ ಶಂಕೆ

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಜಪ್ಪಿನಮೊಗರು ಬಳಿ ನೇತ್ರಾವತಿ ನದಿಗೆ ಹಾರಿದ್ದ ವ್ಯಕ್ತಿಯ ಶವ ಜೆಪ್ಪು ಪಟ್ಲ ಸಮೀಪ ಪೂರ್ತಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಹರೇಕಳ ಕೊಳ್ಕೆ ಶಾಲೆ ಬಳಿಯ ಕಿಶೋರ್ ಅಡ್ಯಂತಾಯ(36) ಎಂದು ಗುರುತಿಸಲಾಗಿದೆ.

ಶನಿವಾರ ಇವರು ಮನೆಯಿಂದ ನಾಪತ್ತೆಯಾಗಿದ್ದರು. ಇವರು ನಾಪತ್ತೆಯಾದ ದಿನ ಮಧ್ಯಾಹ್ನ ನೇತ್ರಾವತಿ ಸೇತುವೆಯಲ್ಲಿ ಕೊಡೆ ಪತ್ತೆಯಾಗಿತ್ತು. ಕೊಡೆಯನ್ನು ಸೇತುವೆ ಮೇಲಿಟ್ಟು ಯುವಕನೋರ್ವ ನದಿಗೆ ಹಾರಿದ್ದನ್ನು ಗಮನಿಸಿದ ವಾಹನ ಸವಾರರೋರ್ವರು ಕಂಕನಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದರು.

ನಾಪತ್ತೆಯಾದ ಎರಡು ದಿನ ಬಳಿಕ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬುಧವಾರ ಶವ ಪತ್ತೆಯಾಗಿದ್ದು ಆತ್ಮಹತ್ಯೆಗೈದಿದ್ದಾರೆ ಎಂದು ಶಂಕಿಸಲಾಗಿದೆ.

ಕಿಶೋರ್ ಅಡ್ಯಂತಾಯ ಮತ್ತು ಅವರ ತಂದೆ ಇಬ್ಬರೇ ಮನೆಯಲ್ಲಿದ್ದು, ಕಿಶೋರ್ ಅವರು ಬೇಸರಗೊಂಡಿದ್ದರು ಎನ್ನಲಾಗಿದೆ.

Get real time updates directly on you device, subscribe now.