ಎಂಟು ಪೊಲೀಸರ ಹತ್ಯೆಗೈದ ರೌಡಿ ವಿಕಾಸ್ ದುಬೆ ದೇವಸ್ಥಾನದಲ್ಲಿ ಸೆರೆ

ಕೊನೆಗೂ ಆತ ಪೊಲೀಸರಿಗೆ ಸ್ವತ: ಶರಣಾಗಿದ್ದಾನೆ ಎಂದು ಉತ್ತರ ಪ್ರದೇಶ ಸ್ಪೆಷಲ್ ಟಾಸ್ಕ್‌ಫೋರ್ಸ್ ಇನ್ಸ್‌ಪೆಕ್ಟರ್ ಅಮಿತಾಭ್ ಅವರು ತಿಳಿಸಿದ್ದಾರೆ.

ಫರೀದಾಬಾದ್ ಹೊಟೇಲ್ ಒಂದಕ್ಕೆ ಬಂದಿದ್ದ ದುಬೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಕರಾವಳಿ ಕರ್ನಾಟಕ ವರದಿ
ಭೋಪಾಲ್: ಎಂಟು ಮಂದಿ ಪೊಲೀಸರನ್ನು ಹತ್ಯೆಗೈದ ರೌಡಿಶೀಟರ್ ವಿಕಾಸ್ ದುಬೆಯನ್ನು ಮಧ್ಯಪ್ರದೇಶದ ಕಾಳಿ ದೇವಸ್ಥಾನದ ಬಳಿ ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ಉಜ್ಜಯನಿಯ ಮಹಾಕಾಳ್ ದೇವಸ್ಥಾನದ ಬಳಿ ವಿಕಾಸ್ ದುಬೆಯನ್ನು ಬಂಧಿಸಲಾಗಿದೆ. ಕಾನ್ಪುರದ ಚೌಬೆಪುರ ಪ್ರದೇಶದ ಬಿಕ್ರು ಗ್ರಾಮದಲ್ಲಿ ತನ್ನ ಬಂಧನಕ್ಕೆ ಬಂದಿದ್ದ ಎಂಟು ಪೊಲೀಸರನ್ನು ದುಬೆ ಗುಂಡಿಕ್ಕಿ ಸಾಯಿಸಿದ್ದ. ಈತನ ಮೇಲೆ ಹತ್ಯೆ, ಅಪಹರಣ, ಲೂಟಿ ಸೇರಿ 60ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳಿವೆ.

ಫರೀದಾಬಾದ್ ಹೊಟೇಲ್ ಒಂದಕ್ಕೆ ಬಂದಿದ್ದ ದುಬೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಪೊಲೀಸರು ಅಲ್ಲಿಗೆ ಧಾವಿಸುವ ಮುನ್ನವೇ ದುಬೆ ಪರಾರಿಯಾಗಿದ್ದ. ಕೊನೆಗೂ ಆತ ಪೊಲೀಸರಿಗೆ ಸ್ವತ: ಶರಣಾಗಿದ್ದಾನೆ ಎಂದು ಉತ್ತರ ಪ್ರದೇಶ ಸ್ಪೆಷಲ್ ಟಾಸ್ಕ್‌ಫೋರ್ಸ್ ಇನ್ಸ್‌ಪೆಕ್ಟರ್ ಅಮಿತಾಭ್ ಅವರು ತಿಳಿಸಿದ್ದಾರೆ.

ಉತ್ತರಪ್ರದೇಶ ಎಸ್‌ಟಿಎಫ್ ಮತ್ತು ಕ್ರೈಂಬ್ರ್ಯಾಂಚ್ ಪೊಲೀಸರು ಫರೀದಾಬಾದ್‌ನಲ್ಲಿ ನಡೆಸಿದ್ದ ಜಂಟಿ ಕಾರ್ಯಾಚರಣೆಯಲ್ಲಿ ವಿಕಾಸ್ ದುಬೆಯ ಸಹಚರರಾದ ಅಂಕುರ್, ಶ್ರವಣ್ ಮತ್ತು ಕಾರ್ತಿಕೇಯ ಆಲಿಯಾಸ್ ಪ್ರಭಾತ್ ಎಂಬವರನ್ನು ಬಂಧಿಸಿದ್ದಾರೆ.

Get real time updates directly on you device, subscribe now.