ಜು.10: ಇಂಧನ ಬೆಲೆ ಏರಿಕೆ ವಿರುದ್ಧ ಕೇರಳದಲ್ಲಿ ವಾಹನ ಮುಷ್ಕರ

ಕಚ್ಚಾ ತೈಲದ ಬೆಲೆ ಇಳಿದಿದ್ದರೂ ಇಂಧನ ಬೆಲೆ ಇಳಿಸದ ಬಗ್ಗೆ ಸಿಐಟಿಯು ರಾಜ್ಯಾಧ್ಯಕ್ಷ  ಆನಂದನ್ ಆಕ್ರೋಶ.

ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ತನಕ ಮುಷ್ಕರ ನಡೆಯಲಿದೆ.

ಕರಾವಳಿ ಕರ್ನಾಟಕ ವರದಿ
ಕಾಸರಗೋಡು: ಇಂಧನ ತೈಲ ಬೆಲೆ ಏರಿಕೆ ಪ್ರತಿಭಟಿಸಿ ಜು.10ರಂದು ಕೇರಳದಲ್ಲಿ ವಾಹನ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಕರೆಯಂತೆ ಮುಷ್ಕರ ನಡೆಯಲಿದೆ.

ಪೆಟ್ರೋಲ್, ಡೀಸೆಲ್ ದರ ನಿಗದಿಯನ್ನು ಜಿ.ಎಸ್ಟಿ ವ್ಯಾಪ್ತಿಗೆ ತರಬೇಕು, ತೈಲ ಬೆಲೆ ಏರಿಕೆ ಹಿಂಪಡೆಯಬೇಕು, ಆಟೋ, ಟ್ಯಾಕ್ಸಿ ಪ್ರಯಾಣ ದರ ಏರಿಕೆ ಮಾಡಬೇಕು ಮುಂತಾದ ಬೇಡಿಕೆಗಳೊಂದಿಗೆ ಮುಷ್ಕರ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ತನಕ ಮುಷ್ಕರ ನಡೆಯಲಿದೆ.

ಕಚ್ಚಾ ತೈಲದ ಬೆಲೆ ಇಳಿದಿದ್ದರೂ ಇಂಧನ ಬೆಲೆ ಇಳಿಸದ ಬಗ್ಗೆ ಸಿಐಟಿಯು ರಾಜ್ಯಾಧ್ಯಕ್ಷ  ಆನಂದನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.