Don is gone! ಗ್ಯಾಂಗ್‌ಸ್ಟರ್ ವಿಕಾಸ್ ದುಬೇ ಎನ್ಕೌಂಟರ್‌ನಲ್ಲಿ ಹತ್ಯೆ!

ಎಂಟು ಪೊಲಿಸರ ಹತ್ಯೆಗೈದು ಬಳಿಕ ತಪ್ಪಿಸಿಕೊಂಡು ಶರಣಾಗಿ ಪೊಲೀಸರ ಕೈಗೆ ಸಿಕ್ಕಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್ ವಿಕಾಸ್ ದುಬೇಯನ್ನು ಪೊಲೀಸರು ಎನ್ಕೌಂಟರ್‌ನಲಿ ಸಾಯಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕಾನ್ಪುರ: ಎಂಟು ಪೊಲಿಸರ ಹತ್ಯೆಗೈದು ಬಳಿಕ ತಪ್ಪಿಸಿಕೊಂಡು ಶರಣಾಗಿ ಪೊಲೀಸರ ಕೈಗೆ ಸಿಕ್ಕಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್ ವಿಕಾಸ್ ದುಬೇಯನ್ನು ಪೊಲೀಸರು ಎನ್ಕೌಂಟರ್‌ನಲಿ ಸಾಯಿಸಿದ್ದಾರೆ.

ಕೊಲೆ, ಸುಲಿಗೆ ಮುಂತಾದ 60 ಕ್ಕೂ ಹೆಚ್ಚು ಗುರುತರ ಅಪರಾಧಗಳಿಗಾಗಿ ಕುಖ್ಯಾತನಾಗಿದ್ದ ವಿಕಾಸ್ ದುಬೇ ನಿನ್ನೆ ಮಧ್ಯಪ್ರದೇಶದ ಉಜ್ಜೈನ್‌ನಲ್ಲಿ ಪೊಲೀಸರಿಗೆ ಶರಣಾಗಿದ್ದ. ಅಲ್ಲಿಂದ ಆತನನ್ನು ಉತ್ತರ ಪ್ರದೇಶಕ್ಕೆ ಕರೆತರುವಾಗ ಕಾನ್ಪುರದಲ್ಲಿ ಪೊಲೀಸ್ ವಾಹನವೊಂದು ಅಪಘಾತಕ್ಕೆ ಈಡಾಗಿದೆ. ಈ ಸಮಯದಲ್ಲಿ ಪರಾರಿಯಾಗಲು ಯತ್ನಿಸಿದ ವಿಕಾಸ್ ದುಬೇಯನ್ನು ಪೊಲಿಸರು ಗುಂಡಿಕ್ಕಿ ಸಾಯಿಸಿದ್ದಾರೆ.

ಪೊಲೀಸರನ್ನು ಹತ್ಯೆಗೈದ ಬಳಿಕ ಪರಾರಿಯಾಗಿದ್ದ ವಿಕಾಸ್ ದುಬೇಯನ್ನು ಉತ್ತರ ಪ್ರದೇಶದ ಪೊಲೀಸರು ಹರಸಾಹಸ ಪಟ್ಟರೂ ಬಂಧಿಸಲಾಗಿರಲಿಲ್ಲ. ಆತ ನೋಯ್ಡಾ, ಫರೀದಾಬಾದ್, ಉಜ್ಜೈನ್‌ಗೆ ಸುತ್ತಾಡುತ್ತಲೇ ಇದ್ದ. ಕೊನೆಗೂ ಉಜ್ಜೈನ್‌ನ ಮಹಾಕಾಲ್ ಮಂದಿರದ ಬಳಿ ಪೊಲೀಸರಿಗೆ ಶರಣಾಗತನಾಗಿ ಈಗ ಎನ್ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾನೆ.

ಸ್ವತಃ ಶರಣಾಗತನಾಗಿದ್ದ ವಿಕಾಸ್ ದುಬೇ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಯಾಕೆ ಪ್ರಯತ್ನಿಸಿದ ಎಂಬುದು ಮಾತ್ರ ಸದ್ಯದ ಅಚ್ಚರಿಯಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Get real time updates directly on you device, subscribe now.