ಪೊಲೀಸರು ದುಬೆಯನ್ನು ಕೊಲ್ಲಬಹುದು: ಸಾವಿಗೆ ಮೊದಲು ಸುಪ್ರೀ ಕೋರ್ಟ್‌ಗೆ ಅರ್ಜಿ

ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ವಿಕಾಸ್ ದುಬೆಯ ಸಹಚರರನ್ನು ಎನ್‌ಕೌಂಟರ್‌ಗಳಲ್ಲಿ ಕೊಲ್ಲಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ವಿಕಾಸ್ ದುಬೆಯನ್ನು ಕೊಲ್ಲಬಹುದು. ವಿಕಾಸ್ ದುಬೆ ಜೀವಕ್ಕೆ ಪೊಲೀಸರಿಂದ ಅಪಾಯವಿರುವುದರಿಂದ ಈ ಬಗ್ಗೆ ಸಲ್ಲಿಸುತ್ತಿರುವ ಅರ್ಜಿಯನ್ನು ವಿಚಾರಣೆ ನಡೆಸಬೇಕು ಎಂದು ಸುಪ್ರೀಂಕೋರ್ಟ್‌ಗೆ ದುಬೆ ಸಾವಿಗೆ ಕೆಲ ಗಂಟೆಗಳ ಮೊದಲು ಮೊರೆ ಹೋಗಿರುವ ಸಂಗತಿ ಬೆಳಕಿಗೆ ಬಂದಿದೆ.

ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳದಿದ್ದರೆ ಪ್ರಯೋಜನವಾಗದು. ದುಬೆ ಸಹಚರರ ಎನ್‌ಕೌಂಟರ್ ಬಗ್ಗೆ ಸಿಬಿಐ ನಿಗಾದಲ್ಲಿ ತನಿಖೆ ನಡೆಯಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಈ ಬಗ್ಗೆ ಕೋರ್ಟ್ ಕಲಾಪಗಳ ಮಾಹಿತಿ ಒದಗಿಸುವ ‘ಬಾರ್ ಎಂಡ್ ಬೆಂಚ್’ ಮಾಹಿತಿ ನೀಡಿದೆ.

Get real time updates directly on you device, subscribe now.