ಬಂಟ್ವಾಳ: ಮೆಲ್ಕಾರ್‌ನಲ್ಲಿ ನಾಲ್ವರು ಪೊಲೀಸರಿಗೆ ಹಲ್ಲೆ: ಆರೋಪಿ ಸೆರೆ

ಘಟನೆಯಲ್ಲಿ ಎ‌ಎಸ್ಸೈ ಶೈಲೇಶ್ ಟಿ ಮತ್ತು ಇತರ ಮೂವರು ಪೊಲೀಸರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಆರೋಪಿಗೂ ಗಾಯಗಳಾಗಿದ್ದು ಚಿಕಿತ್ಸೆ ಪಡೆದಿದ್ದಾನೆ ಎಂದು ತಿಳಿದುಬಂದಿದೆ.

ಕರಾವಳಿ ಕರ್ನಾಟಕ ವರದಿ
ಬಂಟ್ವಾಳ: ತಾಲೂಕಿನ ಮೇಲ್ಕಾರ್‌ನಲ್ಲಿ ಪೊಲೀಸರಿಗೆ ರಾಡ್‌ನಿಂದ ಹಲ್ಲೆಗೈದ ಆರೋಪದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಕಲ್ಲಡ್ಕ ಸಮೀಪದ ಗೋಳ್ತಮಜಲು ನಿವಾಸಿ ಅಬ್ದುಲ್ ಸಲಾಂ(28) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಲಾರಿ ಚಾಲಕನೋರ್ವನ ಜೊತೆ ಅಬ್ದುಲ್ ಸಲಾಂ ಜಗಳ ಮಾಡುತ್ತಿರುವ ಸಂದರ್ಭ ಹೈವೇ ಗಸ್ತು ಪೊಲೀಸರು ಗಲಾಟೆ ನಿಯಂತ್ರಣಕ್ಕೆ ಮುಂದಾದ ಸಂದರ್ಭ ಪೊಲೀಸರ ಕೈಯಲ್ಲಿದ್ದ ಲಾಟಿಯಿಂದ ಮತ್ತು ತನ್ನ ಕೈಯಲ್ಲಿದ್ದ ರಾಡ್‌ನಿಂದ ಅವರಿಗೆ ಸಲಾಂ ಹೊಡೆದಿದ್ದಾನೆ ಎನ್ನಲಾಗಿದೆ.

ಘಟನೆಯಲ್ಲಿ ಎ‌ಎಸ್ಸೈ ಶೈಲೇಶ್ ಟಿ ಮತ್ತು ಇತರ ಮೂವರು ಪೊಲೀಸರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೊಲೀಸ್ ವಾಹನಕ್ಕೂ ಆರೋಪಿ ಹಾನಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗೂ ಗಾಯಗಳಾಗಿದ್ದು ಚಿಕಿತ್ಸೆ ಪಡೆದಿದ್ದಾನೆ ಎಂದು ತಿಳಿದುಬಂದಿದೆ.

ಈ ಘಟನೆಯ ವಿಡೀಯೋ ಸಾಮಾಜಿಕ ಮಾಧ್ಯಮಗಳಲ್ಲಿ ಗುರುವಾರ ಸಂಜೆ ವೈರಲ್ ಆಗಿತ್ತು.

Get real time updates directly on you device, subscribe now.