ಅಡ್ಯಾರ್ ಪಂಚಾಯತ್ ಸದಸ್ಯ ಕೊಲೆ

ಅಡ್ಯಾರ್ ಪಂಚಾಯತ್  ಬಿಜೆಪಿ ಬೆಂಬಲಿತ ಸದಸ್ಯರಾದ ಅಡ್ಯಾರ್ ಪದವು ನಿವಾಸಿ ಯಾಕೂಬ್.

ಕರಾವಳಿ ಕರ್ನಾಟಕ ವರದಿ
ಬಂಟ್ವಾಳ: ತಂಡವೊಂದರಿಂದ ಹಲ್ಲೆಗೊಳಗಾದ ಅಡ್ಯಾರ್ ಪಂಚಾಯತ್ ಸದಸ್ಯರೋರ್ವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸಾವಪ್ಪಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಅಡ್ಯಾರ್ ಪಂಚಾಯತ್  ಬಿಜೆಪಿ ಬೆಂಬಲಿತ ಸದಸ್ಯರಾದ ಅಡ್ಯಾರ್ ಪದವು ನಿವಾಸಿ ಯಾಕೂಬ್ ಮೃತಪಟ್ಟಿದ್ದಾರೆ.

ಅಡ್ಯಾರ್ ಸಮೀಪ ಯಾಕೂಬ್ ಅವರಿಗೆ ತಂಡವೊಂದು ಶುಕ್ರವಾರ ರಾತ್ರಿ 9ಗಂಟೆಗೆ ಹೊತ್ತಿಗೆ  ಹಲ್ಲೆಗೈದಿತ್ತು ಎನ್ನಲಾಗಿದ್ದು, ರಿಕ್ಷಾದಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಗಾಯಾಳು ಯಾಕೂಬ್ ಅವರು ತೆರಳಿ ಆಸ್ಪತ್ರೆಗೆ ದಾಖಲಾಗಿದ್ದರು.

ಮಂಗಳೂರು ಗ್ರಾಮಾಂತರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Get real time updates directly on you device, subscribe now.